ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ ಅದರಲ್ಲಿ ಮಹಿಳೆಯರಿಗೆ ಅನುಕೂಲವಾಗಲಿ ಎಂದು, ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಯೋಜನೆ ಜಾರಿ ಮಾಡಿದ್ದು ಇದೀಗ ಈ ಒಂದು ಯೋಜನೆ ಪರಿಣಾಮ ಮಹಿಳೆಯರು ಬಸ್ ನಲ್ಲಿ ಎಂತೆಂಥ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಈ ಒಂದು ವಿಡಿಯೋದಲ್ಲಿ ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುವ ಹುಲಿಗೆಮ್ಮ ಎನ್ನುವ ಮಹಿಳೆ ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ತಮ್ಮ ಕಷ್ಟವನ್ನು ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯನವರೇ ನಿಮ್ಮ ಉಚಿತ ಬಸ್ ಅವಶ್ಯಕತೆ ನಮಗೆ ಇಲ್ಲ. ಉಚಿತ ಯೋಜನೆಯನ್ನು ತೆಗೆದುಹಾಕಿ ನಾವು ದುಡ್ಡು ಕೊಟ್ಟೆ ಸಂಚರಿಸುತ್ತೇವೆ. ಫ್ರೀ ಬಸ್ ನಿಂದ ನಮಗೆ ಪ್ರತಿದಿನ ವನವಾಸ ಎದುರಿಸುತ್ತಿದ್ದೇವೆ.
ಬಸ್ ಹತ್ತಿದರೆ ಸಾಕು ಕೂರೋಕೆ ಬೇಡ ನಿಲ್ಲೋಕು ಸಹ ಜಾಗ ಇಲ್ಲ. ಬಸ್ ನಲ್ಲಿ ಸಂಚಾರ ಮಾಡುವುದು ತುಂಬಾ ಕಷ್ಟ ಆಗುತ್ತಿದೆ ಹಾಗಾಗಿ ಉಚಿತ ಬಸ್ ಪ್ರಯಾಣ ಯೋಜನೆ ವಾಪಸ್ ತೆಗೆದುಕೊಳ್ಳಿ ಎಂದು ಮಹಿಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾಳೆ. ಇದನೇ ವಿರೋಧಪಕ್ಷ ಬಿಜೆಪಿ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ.
https://www.facebook.com/share/r/1ELesPL9GW/








