ಬೆಂಗಳೂರು : ನಿನ್ನೆಯಿಂದ ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು, ಆದರೆ ಸರ್ವ ಸಮಸ್ಯೆ ಹಾಗೂ ಮೊಬೈಲ್ನಲ್ಲಿ ತಾಂತ್ರಿಕ ಸಮಸ್ಯೆಯಲ್ಲಿ ಇದುವರೆಗೂ ಕೇವಲ ರಾಜ್ಯಾದ್ಯಂತ 10642 ಕುಟುಂಬಗಳ ದತ್ತಾಂಶ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
ಹೌದು ರಾಜ್ಯಾದ್ಯಂತ ನಿನ್ನೆಯಿಂದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ನಿನ್ನೆ ಒಂದೇ ದಿನ ಕೇವಲ 10,642 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ ವಿಭಧ ಜಿಲ್ಲೆಗಳಲ್ಲಿ ದತ್ತಾಂಶ ಸಂಗ್ರಹ ಮಾಡುತ್ತಿರುವ ಸಮೀಕ್ಷೆಗಾರರು ಮೊದಲ ದಿನ ಬೆರಳಣಿಕೆ ಎಷ್ಟು ಮಾತ್ರ ದತ್ತಾಂಶ ಸಂಗ್ರಹಿಸಲಾಗಿದೆ 15 ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮನೆಗಳಲ್ಲಿ ದತ್ತಾಂಶ ಸಂಗ್ರಹಿಸಲಾಗಿದೆ.
ಜಿಲ್ಲಾವಾರು ಸಮೀಕ್ಷೆ ನೋಡುವುದಾದರೆ ಹಾವೇರಿಯಲ್ಲಿ 680 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ. ವಿಜಯಪುರದಲ್ಲಿ ಕೇವಲ 7, ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ. ಉತ್ತರ ಕನ್ನಡದಲ್ಲಿ ಕೂಡ 7 ಕುಟುಂಬಗಳ ದತ್ತಾಂಶ ಸಂಗ್ರಹಿಸಲಾಗಿದೆ. ದಾವಣಗೆರೆಯಲ್ಲಿ 7 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದ್ದು, ಕೊಪ್ಪಳದಲ್ಲಿ 6 ಕುಟುಂಬಗಳ ದತ್ತಾಂಶಸಂಗ್ರಹವಾಗಿದೆ. ಉಡುಪಿಯಲ್ಲಿ ಸಹ 7 ಕುಟುಂಬಗಳ ದತ್ತಾಂಶ ಸಂಗ್ರಹವಾಗಿದೆ.