ಕೊಡಗು : ಮೀಸಲು ಅರಣ್ಯದಲ್ಲಿ ತೆಗದ ಮರ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಡಗಿನಲ್ಲಿ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಗಳನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ ಡಿಆರ್‌ಎಫ್‌ಒ ಉಲ್ಲಾಸ್, ವಾಚರ್ ಚಂದ್ರಶೇಖರ್ ಹಾಗೂ ಕೆ.ಎ ಅಂತೋನಿ ಅಮಾನತುಗೊಳಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.
ಅರಣ್ಯದಲ್ಲಿ ತೇಗದ ಮರ ಕಳ್ಳತನ ನಡೆದಿತ್ತು. ಬಳಿಕ ಈ ಒಂದು ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ಎಸ್ಐಟಿ ಒಂದನ್ನು ರಚನೆ ಮಾಡಿದ್ದು, ತನಿಖೆಗೆ ಖುದ್ದು ಸಚಿವ ಈಶ್ವರ ಖಂಡ್ರೆ ಆದೇಶ ನೀಡಿದ್ದರು. ಮರಕಳ್ಳತನದಲ್ಲಿ ಭಾಗಿಯಾಗಿದ್ದ 7 ಜನರ ವಿರುದ್ಧ ಕೆಎಸ್ ದಾಖಲಾಗಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಅರಣ್ಯ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿ ಇಲಾಖೆ ಆದೇಶ ಹೊರಡಿಸಿದೆ.








