ಬೆಂಗಳೂರು : ಬಿಜೆಪಿ ನಾಯಕನ ಪುತ್ರನ ವಿರುದ್ಧ ಪ್ರೀತಿಸಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿ ಕೃಷ್ಣ ಜೆ. ರಾವ್ ಸಲ್ಲಿಸಿದ ಅರ್ಜಿ ವಿತರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ಈ ವೇಳೆ ಷರತ್ತಿನ ಮೇರೆಗೆ ಕೃಷ್ಣ ಜೆ.ರಾವ್ ವಿರುದ್ಧದ ಪ್ರಕರಣಕ್ಕೆ ಇದೀಗ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಆರೋಪಿಯ ದೈಹಿಕ ಸಂಪರ್ಕದಿಂದ ಯುವತಿಗೆ ಮಗುವಾಗಿದೆ. 10 ತಿಂಗಳ ಮಗು ತಾಯಿಯನ್ನು ಅನಾಥವನ್ನಾಗಿಸುವುದು ಬೇಡ. ಮಗು ಹಾಗು ತಾಯಿಗೆ ಮಾಸಿಕ 75,000 ರೂಪಾಯಿ ಪಾವತಿಸಲು, ಮುಂದಿನ ಆದೇಶದವರೆಗೂ ತಿಂಗಳಿಗೆ 75,000 ಪಾವತಿಸಲು ಅರ್ಜಿದಾರ ಕೃಷ್ಣ ಜೆ. ರಾವ್ ಗೆ ಹೈಕೋರ್ಟ್ ಸೂಚನೆ ನೀಡಿದೆ. ಸಂಬಂಧಿಕರು ಮಾಧ್ಯಮಗಳಿಗೆ ಹೇಳಿಕೆ ನೀಡಿದಂತೆ ಸೂಚನೆ ನೀಡಿತು. ಷರತ್ತಿನ ಮೇರೆಗೆ ಕೃಷ್ಣ ಜಯರಾ ವಿರುದ್ಧದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.








