ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ ಆಹಾರ ಇಲಾಖೆ ಅಧಿಕಾರಿಗಳು ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ನಡೆಸುತ್ತಿದ್ದು, ಇದೀಗ ಬೆಂಗಳೂರಿನ ರಾಜಾಜಿನಗರದ ಆಹಾರ ಇಲಾಖೆಯಲ್ಲಿ ಜನರು ರದ್ದಾಗಿದ್ದಂತಹ ತಮ್ಮ ಬಿಪಿಎಲ್ ಕಾರ್ಡ್ಗಳನ್ನು ಸರಿಪಡಿಸಿಕೊಂಡು ಮತ್ತೆ ಆಕ್ಟಿವ್ ಮಾಡಿಸಿಕೊಂಡು ಸಂತಸದಿಂದ ಹೊರ ಬರುತ್ತಿದ್ದಾರೆ.
ಹೌದು ಬಿಪಿಎಲ್ ಕಾರ್ಡ್ ಮತ್ತೆ ಆಕ್ಟಿವ್ ಆಗಿದ್ದು, ಜರು ಸಂತೋಷಗೊಂಡಿದ್ದಾರೆ. ಕಾರ್ಡ್ ಆಕ್ಟಿವ್ ಆಗುತ್ತಿದ್ದಂತೆ ಜನರು ಖುಷಿಯಿಂದ ಇಲಾಖೆಯಿಂದ ಹೊರಗಡೆ ಬಂದಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಅಧಿಕಾರಿಗಳು ಕಾರ್ಡ ಪರಿಷ್ಕರಣೆ ಮಾಡುತ್ತಿದ್ದು, ಎಪಿಎಲ್ ಗೆ ಶಿಫ್ಟ್ ಆಗಿದ್ದ ಕಾರ್ಡುಗಳ ಮರುಪರುಶೀಲನೆ ಮಾಡಲಾಗುತ್ತಿದೆ.
ಕೆಲವೊಂದು ಬಿಪಿಎಲ್ ಕಾರ್ಡ್ ಅಮಾನತ್ತಿನಲ್ಲಿದ್ದವು ಆದಾಯ ತೆರಿಗೆ ಹೊಂದಿದವರ ಕಾರ್ಡ್ ರದ್ದಾಗಿದ್ದವು.BPL ಕಾರ್ಡ್ ಪರಿಶೀಲನೆ ಸದ್ಯಕ್ಕೆ ಭರದಿಂದ ಸಾಗಿದೆ. ಕಾರ್ಡ್ ಪರಿಶೀಲನೆ ಬಳಿಕ ಅಧಿಕಾರಿಗಳು ಬಿಪಿಎಲ್ ಕಾರ್ಡ್ ಆಕ್ಟಿವ್ ಮಾಡುತ್ತಿದ್ದಾರೆ.ಆಹಾರ ಇಲಾಖೆ ಸ್ಥಳೀಯ ಕಚೇರಿಯಲ್ಲಿ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರದ್ದಾಗಿರುವ ಬಿಪಿಎಲ್ ಕಾರ್ಡ್ ಗಳ ತಿದ್ದುಪಡಿ ಕಾರ್ಯ ನಡೆಯಲಿದೆ.
ಆಧಾರ್, ಪಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹತೆ ಹೊಂದಿದವರು ಕಾರ್ಡುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಿ ನೌಕರರೇ, ತೆರಿಗೆ ಪಾವತಿದಾರರೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುವರು. ಕಾರ್ಡ್ ಹೊಂದಿದವರು ಬಡವರೇ, ಶ್ರೀಮಂತರೇ ಎಂದು ಮನೆ ಪರಿಶೀಲಿಸಿ ಆರ್ಡಿ ನಂಬರ್, ಜೊತೆಗೆ ದಾಖಲೆ ಪರಿಶೀಲಿಸಲಿದ್ದಾರೆ. ಕಾರ್ಡ್ ಬದಲಾಯಿಸಲು ಕನಿಷ್ಠ 10 ರಿಂದ 15 ದಿನ ಸಮಯಾವಕಾಶ ಬೇಕಾಗುತ್ತದೆ ಎನ್ನಲಾಗಿದೆ.