ಬೆಂಗಳೂರು : ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವಾಗಲೂ ಅನುದಾನ ದುರ್ಬಳಕೆ ಆಗುತ್ತದೆ. SCSP-TSP ಅನುದಾನವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧವಾಗಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟಿದ್ದ 15000 ಕೋಟಿ ಹಣ ಈಗ ಗ್ಯಾರಂಟಿ ಯೋಜನೆಗಳಿಗಾಗಿ ಡೈವರ್ಟ್ ಮಾಡಿಕೊಂಡಿದ್ದಾರೆ.ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಾರೆ. ಅಲ್ಲಿಯೂ 20,000 ಕೋಟಿ ಗ್ಯಾರೆಂಟಿಗಾಗಿ ಡೈವರ್ಟ್ ಮಾಡುತ್ತಿದ್ದಾರೆ ಎಂದು ಗಂಭೀರಾವಾಗಿ ಆರೋಪಿಸಿದರು.
ಇವತ್ತು ವಿಶೇಷ ಸಭೆ ಮತ್ತು ಕಾರ್ಯಗಾರ ನಡೆಸಿದ್ದೇವೆ. 14 ತಂಡಗಳನ್ನು ರಚಿಸಿ ಜನರಿಗೆ ಜಾಗೃತಿ ಮೂಡಿಸಲು ಸಜ್ಜಾಗಿದ್ದೇವೆ. SCSP-TSP ಸಮಾಜಕ್ಕೆ ಮೀಸಲಿಟ್ಟಿದ್ದ ಹಣ ಅವರಿಗೆ ಬಳಕೆಯಾಗಬೇಕು. ಕಾಂಗ್ರೆಸ್ ಬಜೆಟ್ ನಲ್ಲಿ ಅನುದಾನ ಬಳಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಳೆದ ಬಜೆಟ್ ನಲ್ಲೂ 15 ಸಾವಿರದಿಂದ 16 ಸಾವಿರ ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದೆ. SCSP-TSP ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಬಾರಿಯೂ ಹಣ ದುರ್ಬಳಕೆ ಮಾಡುತ್ತಾರೆಂಬ ಮಾಹಿತಿ ಇದೆ ಹೀಗಾಗಿ 14 ತಂಡಗಳನ್ನು ರಚಿಸಿ ನಾವು ಜಾಗೃತಿ ಮೂಡಿಸುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.