Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : `ಅಕ್ರಮ ಪಡಿತರ ಚೀಟಿದಾರರಿಗೆ’ ಬಿಗ್ ಶಾಕ್ : ಸುಳ್ಳು ಮಾಹಿತಿ ನೀಡಿ `ರೇಷನ್ ಕಾರ್ಡ್’ ಪಡೆದ್ರೆ ದಂಡ ಫಿಕ್ಸ್.!
KARNATAKA

BIG NEWS : `ಅಕ್ರಮ ಪಡಿತರ ಚೀಟಿದಾರರಿಗೆ’ ಬಿಗ್ ಶಾಕ್ : ಸುಳ್ಳು ಮಾಹಿತಿ ನೀಡಿ `ರೇಷನ್ ಕಾರ್ಡ್’ ಪಡೆದ್ರೆ ದಂಡ ಫಿಕ್ಸ್.!

By kannadanewsnow57

ಬೆಳಗಾವಿ : ಅಕ್ರಮ ಪಡಿತರ ವಿರುದ್ಧ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ತಪ್ಪಿತಸ್ಥರೆಂದು ಸಾಬೀತಾದ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು.

ರಾಜ್ಯಾದ್ಯಂತ ಜನವರಿ – 2021 ರಿಂದ ಮೇ 2023ರ ಅವಧಿಯಲ್ಲಿ 3,35,463 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದ್ದು, ಇವರಿಗೆ ₹13.51 ಕೋಟಿ ದಂಡ ವಿಧಿಸಿ, ಅನರ್ಹರಿಗೆ ನೀಡಿದ ಸವಲತ್ತುಗಳಿಂದ ಉಂಟಾದ ನಷ್ಟವನ್ನು ಭರಿಸಲು ಸರ್ಕಾರ ಕ್ರಮವಹಿಸಿದೆ.

ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸುವ ಪಡಿತರ ಅಕ್ರಮ ಸಾಗಣೆ ಕಂಡುಬಂದಲ್ಲಿ ಕೂಡಲೇ ದಾಳಿ ನಡೆಸಿ, ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಪ್ರಕರಣ ದಾಖಲಿಸಿ, ಅಕ್ರಮ ಪಡಿತರ ದಾಸ್ತಾನು ಮುಟ್ಟುಗೋಲು ಹಾಕಿಕೊಂಡು, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮುಟ್ಟುಗೋಲು ದಾಸ್ತಾನನ್ನು ವಿಲೇ ಮಾಡಿ, ವಿಲೇ ಪಡಿಸಿದ ಪಡಿತರ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲಾಗುತ್ತಿದೆ.

ರಾಜ್ಯಾದ್ಯಂತ 2024-25ನೇ ಸಾಲಿನಲ್ಲಿ 213 ಎಫ್‌ಐಆರ್ ದಾಖಲಿಸಿ ಒಟ್ಟು ₹2,68,07,872 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, 238 ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಈ ಕುರಿತು ಪರಿಶೀಲಿಸಲು ಮೇಲ್ವಿಚಾರಣೆ ಮಾಡಲು ಇಲಾಖಾ ವತಿಯಿಂದ ನೋಡಲ್ ಅಧಿಕಾರಿಗಳನ್ನು ವಿಭಾಗವಾರು ನೇಮಕ ಮಾಡಲಾಗಿದೆ.

ಈ ಹಿಂದೆ ಕೆಲವು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದ ಫಲಾನುಭವಿಗಳು ಹಾಲಿ ಬಡತನ ರೇಖೆಗಿಂತ ಮೇಲೆ ಬಂದಿದ್ದು, ಸದರಿ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುತ್ತಿದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ಅಥವಾ ಸಿಎಸ್‌ಟಿ ಪಾವತಿದಾರರ ವಿವರಗಳನ್ನು ಕುಟುಂಬ ತಂತ್ರಾಂಶದಿಂದ ಪಡೆದು ದಂಡ ವಸೂಲಿ ಮಾಡಲಾಗುತ್ತಿದೆ.

ಪ್ರಸ್ತುತ ಆಹಾರ ಇಲಾಖೆಯಲ್ಲಿ ಬಳಸುವ ಸರ್ವರ್ ಹಳೆಯದಾಗಿದೆ. ಈ ಕಾರಣದಿಂದಾಗಿ ಎನ್‌ಐಸಿಯಿಂದ ಕೆಎಸ್‌ಡಿಸಿ ಗೆ ಆಹಾರ ತಂತ್ರಾಂಶದ ಮೈಗ್ರೇಶನ್ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಕಾರ್ಯ ಪೂರ್ಣವಾದ ನಂತರ ಆದ್ಯತಾ ಪಡಿತರ ಚೀಟಿ ನೀಡುವ ಕಾರ್ಯ ಹಾಗೂ ಪಡಿತರ ತಿದ್ದುಪಡಿ ಕಾರ್ಯ ನಿರಂತರವಾಗಿ ನಡೆಯಲಿದೆ.

BIG NEWS : `ಅಕ್ರಮ ಪಡಿತರ ಚೀಟಿದಾರರಿಗೆ' ಬಿಗ್ ಶಾಕ್ : ಸುಳ್ಳು ಮಾಹಿತಿ ನೀಡಿ `ರೇಷನ್ ಕಾರ್ಡ್' ಪಡೆದ್ರೆ ದಂಡ ಫಿಕ್ಸ್.! BIG NEWS: Big shock to 'illegal ration card holders': Penalty fixed for obtaining 'ration card' by giving false information
Share. Facebook Twitter LinkedIn WhatsApp Email

Related Posts

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

1 Min Read

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

1 Min Read

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

1 Min Read
Recent News

​ಯು18 ಏಷ್ಯಾ ಕಪ್ 2026: ಭಾರತೀಯ ಹಾಕಿ ತಂಡಗಳ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ

​ಫ್ರೆಂಚ್ ಓಪನ್ ಚಾಂಪಿಯನ್: ಮಾಯಾ ಚ್ವಾಲಿನ್ಸ್ಕ ವಿರುದ್ಧ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಿರಾ ಆಂಡ್ರೀವಾ

​ಕುಟುಂಬದ ನಿರ್ವಹಣೆಗೆ ‘ಉದ್ಯೋಗವಿಲ್ಲ’ ಎಂಬ ನೆಪ ನಡೆಯದು: ಪತಿಯ ಹೊಣೆಗಾರಿಕೆಯನ್ನು ಎತ್ತಿ ಹಿಡಿದ ದೆಹಲಿ ನ್ಯಾಯಾಲಯ

​ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ: ಖಾದ್ಯ ತೈಲದ ಪ್ಯಾಕೇಜಿಂಗ್ ಗಾತ್ರದಲ್ಲಿ ಏಕರೂಪತೆ ಕಡ್ಡಾಯ!

State News
KARNATAKA

ರಾಮನಗರದ ಬಿಡದಿ ಬಳಿ ಸರಣಿ ಅಪಘಾತ: ಪ್ರಾಣಾಪಾಯದಿಂದ ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪಾರು

By ವಸಂತ ಬಿ ಈಶ್ವರಗೆರೆ KARNATAKA 1 Min Read

ರಾಮನಗರ: ಜಿಲ್ಲೆಯ ಬಿಡದಿ ಬಳಿ ಇಂದು ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕೃಷ್ಣರಾಜಪೇಟೆ (ಕೆ.ಆರ್. ಪೇಟೆ) ವಿಧಾನಸಭಾ ಕ್ಷೇತ್ರದ ಮಾಜಿ…

BREAKING: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆದ ರಾಮಲಿಂಗಾರೆಡ್ಡಿ

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿಯಾಗಿ ಕೆಎಎಸ್ ಅಧಿಕಾರಿ ಡಾ. ರಾಜೇಂದ್ರ ಪ್ರಸಾದ್ ನೇಮಕ

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.