ಮಂಗಳೂರು : ರಾಜ್ಯದಲ್ಲಿ ಪಿಎಫ್ಐಯನ್ನು ನಿಷೇಧ ಗೊಳಿಸಲಾಗಿದ್ದು, ಇದೀಗ ನಿಷೇಧಿತ ಪಿ ಎಫ್ ಐ ಸಂಘಟನೆಯನ್ನು ಆಕ್ಟಿವ್ ಮಾಡಿದ ಧರ್ಮ ಗುರುವನ್ನು ಅರೆಸ್ಟ್ ಮಾಡಲಾಗಿದೆ. ಸೈಯದ್ ಇಬ್ರಾಹಿಂ ಅನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಿಷೇಧಿತ ಪಿ ಎಫ್ ಐ ಪರವಾಗಿ ಇಬ್ರಾಹಿಂ ಪ್ರಚಾರ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದ್ದು, ಪಿ ಎಫ್ ಐ ಸಂಘಟನೆ ಸದಸ್ಯರನ್ನು ಇಬ್ರಾಹಿಂ ಸಂಪರ್ಕ ಮಾಡಿದ್ದ. ದಕ್ಷಿಣ ಕನ್ನಡದಲ್ಲಿ ಇಬ್ರಾಹಿಂ ಸಲ್ಮಾನ್ ಸಲ್ಮ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಪಿಎಫ್ಐ ಪ್ರಚಾರ ಮಾಡುತ್ತಿದ್ದ. ಮತ್ತೆ ಚಟುವಟಿಕೆ ಆರಂಭಿಸಲು ಸಯ್ಯದ್ ಇಬ್ರಾಹಿಂ ಪ್ರಚೋದನೆ ನೀಡುತ್ತಿದ್ದ.
ನಗರದ ಉರ್ವ ಸ್ಟೋರ್ ಬಳಿ ಸೈಯದ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಅಡಿ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಪಿ ಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಕ್ಟೋಬರ್ 24ರ ವರೆಗೆ ನ್ಯಾಯಾಂಗ ಬಂಧನಕೆ ನೀಡಿ ಕೋರ್ಟ್ ಆದೇಶ ಹೊರಡಿಸಿತು.