ಬೆಂಗಳೂರು : ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಪರೀಕ್ಷಾ ಪೆ ಚರ್ಚಾ” 2025-26ನೇ ಸಾಲಿನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವಾಲಯ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿ “ಪರೀಕ್ಷಾ ಪೆ ಚರ್ಚಾ”ದ 2026 9ನೇ ಆವೃತ್ತಿಯನ್ನು ನವದೆಹಲಿಯ ಭಾರತ್ ಮಂಟಪದಲ್ಲಿ (ಟೌನ್-ಹಾಲ್ ರೂಪದಲ್ಲಿ) ಆಯೋಜಿಸುವ ಸಂಬಂಧ ಈ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರೊಂದಿಗೆ ವಿದ್ಯಾರ್ಥಿಗಳಲ್ಲಿರುವ “ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವ ಕುರಿತು ನೇರವಾಗಿ ಸಂವಹನ ನಡೆಸುವರು.
“ಪರೀಕ್ಷಾ ಪೆ ಚರ್ಚಾ”ದ 2025 8ನೇ ಆವೃತ್ತಿಯಲ್ಲಿ 5 ಕೋಟಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ದೇಶಾದ್ಯಂತ ಭಾಗವಹಿಸಿರುತ್ತಾರೆ. ದಿನಾಂಕ:01.12.2025 ರಿಂದ 11.01.2026ರ ವರೆಗೆ 6 ರಿಂದ 12ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಭಾಗವಹಿಸಲು ಸೂಚಿಸಿದೆ.
ಉದ್ದೇಶಗಳು:-
ಮಕ್ಕಳಲ್ಲಿರುವ ಪರೀಕ್ಷಾ ಒತ್ತಡ ಕಡಿಮೆ ಮಾಡುವುದು.
ನಮ್ಮ ಭವಿಷ್ಯದ ರಾಷ್ಟ್ರ ನಿರ್ಮಾತೃಗಳಿಗೆ ಕಲಿಕೆಯನ್ನು ಹೆಚ್ಚು ಆಸಕ್ತಿ ಹಾಗೂ ಸಂತೋಷದಾಯಕವಾಗಿಸುವುದು.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ನೇರ ಸಂವಹನ ನಡೆಸಿ, ಪರೀಕ್ಷಾ ಪದ್ಧತಿ ಅಮೂಲ್ಯವಾದ ಪಡೆದು ಪರೀಕ್ಷಾ ಪದ್ಧತಿಯನ್ನು ಕುರಿತು ಉತ್ತಮಪಡಿಸುವುದು. ಸಲಹೆಗಳನ್ನು
ಅರ್ಹತೆ:-
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ 6 ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಪ್ರಸಕ್ತ ಸಾಲಿನ ಸ್ಪರ್ಧೆಯು ಬಹು ಆಯ್ಕೆಯ ಪ್ರಶ್ನೆ (MCQ)ಗಳಾಗಿವೆ. ಭಾಗವಹಿಸುವವರೆಲ್ಲರಿಗೂ ಪ್ರಮಾಣ ಪತ್ರ ದೊರೆಯುವುದು. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳನ್ನು DSERT ರವರು Shortlist ಮಾಡಿ ಆಯ್ಕೆಯಾದ ಪ್ರಶ್ನೆಗಳಿಗೆ ಮಾಧ್ಯಮಗಳಲ್ಲಿ ಏರ್ಪಡಿಸುವ “ಪರೀಕ್ಷಾ ಪೆ ಚರ್ಚಾ” 2026ರಲ್ಲಿ ಕೇಳಲು ಅವಕಾಶ ಮಾಡಲಾಗುವುದು.









