ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ನಾಯಕಿಯರನ್ನು ನೇಮಕಮಾಡುವ ಕುರಿತು ಕೇಂದ್ರ ಬಿಜೆಪಿ ನಾಯಕರು ಚಿಂತನೆ ನಡೆಸುತ್ತಿದ್ದು, ಈ ವಿಚಾರವಾಗಿ ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಅವರು ಬಿಜೆಪಿ ಕುರಿತು ವ್ಯಂಗ್ಯವಾಡಿದ್ದು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅರ್ಧನಾರೀಶ್ವರ ರನ್ನು ಹುಡುಕಿಕೊಳ್ಳಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟೀಯ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನು ಹುಡುಕುತ್ತಿದ್ದಾರೆ. ಅವರು, ಅರ್ಧನಾರೀಶ್ವರರನ್ನು ಹುಡುಕಲಿ. ಎರಡು ವರ್ಷ ಆದರೂ ಅಧ್ಯಕ್ಷರನ್ನು ಆಯ್ಕೆ ಮಾಡಿಲ್ಲ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನು ಹುಡುಕುತ್ತಿದ್ದಾರೆ ಅರ್ಧನಾರೀಶ್ವರ ರನ್ನು ಹುಡುಕಿದರು ಬಹಳ ಸಂತೋಷ ಎಂದು ವ್ಯಂಗ್ಯವಾಡಿದರು. ಸಿಎಂ ಬದಲಾವಣೆ ಬಗ್ಗೆ ಆರ್ ಅಶೋಕ್ ಹಾಗೂ ಬಿ ವೈ ವಿಜಯೇಂದ್ರ ಮಾತನಾಡಿರುವ ಕುರಿತು, ಆರ್.ಅಶೋಕ್ ವಿಜಯೇಂದ್ರ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲಿ. ಎಂದು ತಿರುಗೇಟು ನೀಡಿದರು.