ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದರಿಂದ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಈ ನಡುವೆಯೂ ಕೆ ಎಂ ಎಫ್ ನಿಂದ ( KMF ) ನಂದಿನಿ ಹಾಲಿನ ದರಗಳನ್ನು ಹೆಚ್ಚಳ (Nandini Milk Price Hike ) ಮಾಡಲಾಗಿತ್ತು. ಈ ಬೆನ್ನಲ್ಲೇ ನಂದಿನಿ ಉತ್ಪನ್ನಗಳ ಬೆಲೆಯನ್ನು ( Nandini Product Price ) ಸಹ ಹೆಚ್ಚಿಸಿ, ರಾಜ್ಯದ ಜನತೆಗೆ ಶಾಕ್ ಮೇಲೆ ಶಾಕ್ ನೀಡಿದೆ.
ಹೌದು.. ಕೆ ಎಂ ಎಫ್ ನಿಂದ ಸದ್ದಿಲ್ಲದಂತೆ ಸಿಹಿ ತಿನಿಸುಗಳು ಹಾಗೂ ತುಪ್ಪದ ದರಗಳನ್ನು ಹೆಚ್ಚಳ ಮಾಡಲಾಗಿದೆ. ಈಗಾಗಲೇ ಒಂದೇ ವರ್ಷದಲ್ಲಿ ಹಲವು ಬಾರಿ ನಂದಿನಿ ತುಪ್ಪದ ಬೆಲೆಯನ್ನು ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೊಮ್ಮೆ ನಂದಿನಿ ತುಪ್ಪದ ದರವನ್ನು ಹೆಚ್ಚಳ ಮಾಡಲಾಗಿದೆ. ನಂದಿನಿ ಉತ್ಪನ್ನಗಳ ದರವನ್ನು ಶೇ.5 ರಿಂದ 15ರಷ್ಟು ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ.
ಅಂದಹಾಗೇ ಕಳೆಗ ನವೆಂಬರ್ 24ರಂದು ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂ ಹೆಚ್ಚಳ ಮಾಡಲಾಗಿತ್ತು. ಈ ದರ ಹೆಚ್ಚಳದಿಂದ ಬರುವಂತ ಹಣವನ್ನು ರೈತರಿಗೆ ನೀಡುವುದಾಗಿಯೂ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಈಗ ನಂದಿನಿ ಸಿಹಿ ಉತ್ಪನ್ನಗಳ ದರವನ್ನು ಹೆಚ್ಚಳ ಮಾಡಲಾಗಿದೆ.
ಹೀಗಿದೆ ನಂದಿನಿ ಉತ್ಪನ್ನಗಳ ಹೆಚ್ಚಳಗೊಂಡ ದರ ಪಟ್ಟಿ
- ನಂದಿನಿ ಪೇಡ – 250 ಗ್ರಾಂ ಬೆಲೆಯನ್ನು 105 ರಿಂದ 140ಗೆ ಹೆಚ್ಚಳ ಮಾಡಲಾಗಿದೆ.
- ನಂದಿನಿ ತುಪ್ಪ – 1 ಕೆಜಿಗೆ 520 ರೂ ನಿಂದ 610ಕ್ಕೆ ಏರಿಸಲಾಗಿದೆ.
- ನಂದಿನಿ ಮೈಸೂರು ಪಾಕ್ – 250 ಗ್ರಾಂ ಬೆಲೆಯನ್ನು 115 ರಿಂದ 160ಗೆ ಏರಿಕೆ
- ನಂದಿನಿ ಪ್ಲೇವರ್ಡ್ ಮಿಲ್ಕ್ – 20 ರೂ ನಿಂದ 25ಕ್ಕೆ ಹೆಚ್ಚಳ
- ನಂದಿನಿ ಜಾಮೂನ್ – ಅರ್ಧ ಕೆಜಿ ಟಿನ್ ಗೆ 105 ರೂ ನಿಂದ 135ಕ್ಕೆ ಏರಿಕೆ
- ನಂದಿನಿ ಕೋವಾ – 200 ಗ್ರಾಂ ಬೆಲೆಯನ್ನು 90 ರೂ ನಿಂದ 100ಕ್ಕೆ ಹೆಚ್ಚಳ
- ನಂದಿನಿ ಪನ್ನೀರ್ – ಪ್ರತಿ ಕೆ.ಜಿ ಗೆ 20 ರೂ ಏರಿಕೆ
- ನಂದಿನಿ ಐಸ್ ಕ್ರೀಮ್ – ಪ್ರತಿ ಪ್ಯಾಕೇಟ್ ಮೇಲೂ 5 ರೂ ಹೆಚ್ಚಳ ಮಾಡಲಾಗಿದೆ.