ಬೆಂಗಳೂರು : ರಾಜ್ಯಾ, ದೇಶ ಸೇರಿದಂತೆ ಎಲ್ಲೆಡೆ ಸಿಲಿಂಡರ್ ವ್ಯತ್ಯಯದಲ್ಲಿ ಭಾರಿ ಸಮಸ್ಯೆ ಉಂಟಾಗಿದೆ. ಈಗಲೇ ಬೆಂಗಳೂರಿನಲ್ಲಿ ಬಹುತೇಕ ಹೋಟೆಲ್ ಗಳು ಬಂದ್ ಆಗಿವೆ. ಸಿಲಿಂಡರ್ ಸಮಸ್ಯೆ ಬೆನ್ನಲ್ಲೇ ತುಂಬಿದ ಸಿಲಿಂಡರ್ ಕಳ್ಳತನ ನಡೆದಿದೆ.
ಬೆಂಗಳೂರಿನ ನಾಗರಬಾವಿಯ ಕಲ್ಯಾಣ ನಗರದಲ್ಲಿ ಈ ಒಂದು ಕಳ್ಳತನ ನಡೆದಿದೆ. ಕಲ್ಯಾಣ ನಗರದಲ್ಲಿ ಬೈಕಿನಲ್ಲಿ ಬಂದು ಮನೆಯ ಕಂಪೌಂಡ್ ನಲ್ಲಿದ್ದಂತ ಚೀಲದ ಸಮೇತ ಸಿಲಿಂಡರ್ ಕಳ್ಳತನ ನಡೆದಿದೆ. ಮನೆಯವರು ಸಿಲಿಂಡರ್ ಫುಲ್ ಮಾಡಿ ಚೀಲದಲ್ಲಿ ಇಟ್ಟಿದ್ದರು. ಇದನ್ನು ಮೊದಲೇ ಗಮನಿಸಿದ್ದ ಕಳ್ಳ ರಾತ್ರಿ ಬೈಕ್ ನಲ್ಲಿ ಬಂದು ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ್ದಾನೆ.








