ಬೆಂಗಳೂರು : ಬೆಂಗಳೂರಿನಲ್ಲಿ ರೈಲ್ವೆ ವೀಲ್ ಫ್ಯಾಕ್ಟರಿಯ ಉದ್ಯೋಗಿಗೆ ಜಾತಿನಿಂದನೆ ಮತ್ತು ಕೊಲೆಗೆ ಸಂಚು ಆರೋಪದ ಹಿನ್ನಲೆಯಲ್ಲಿ ಇದೀಗ ಕೋರ್ಟ್ ಸೂಚನೆಯ ಮೇರೆಗೆ ಕಂಪನಿಯ 16 ಉದ್ಯೋಗಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ರೈಲ್ವೇ ವೀಲ್ ಫ್ಯಾಕ್ಟರಿ ಹಿರಿಯ ಮೆಕ್ಯಾನಿಕ್ ಬಸವಲಿಂಗಪ್ಪ ಅವರಿಂದ ದೂರು ಸಲ್ಲಿಕೆಯಾಗಿದ್ದು, ಯಲಹಂಕ ರೈಲ್ವೆ ವೀಲ್ ಫ್ಯಾಕ್ಟರಿ ಹಿರಿಯ ಮೆಕ್ಯಾನಿಕ್ ಬಸವಲಿಂಗಪ್ಪ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಪದೋನ್ನತಿ ಮತ್ತು ವೇತನ ಮುಂಬಡ್ತಿ ನೀಡದೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ಶರ್ಟ್ ಕಾಲರ್ ಹಿಡಿದು ಬಸವಲಿಂಗಪ್ಪಗೆ ಜಾತಿ ನಿಂದನೆ ಮಾಡಲಾಗಿದೆ. ನಿಂಗೇಗೌಡ ಅಬ್ದುಲ್ ಸೇರಿದಂತೆ ಹದಿನಾರು ಉದ್ಯೋಗಿಗಳ ವಿರುದ್ಧ ಕೆಎಸ್ ದಾಖಲಾಗಿದೆ. ರೈಲ್ವೆ ಕಾಯಿದೆ,-1989 ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಕಂಪನಿಯ ವಿರುದ್ಧ ಬೆಂಗಳೂರಿನ 71ನೇ ಸಿಸಿಎಚ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಇದೀಗ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.