Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಕಣ್ಣು ಮುಚ್ಚಿ ಬಿಡುವುದರೊಳಗೆ ಹಣ ವರ್ಗಾವಣೆ! ಹೇಗೆ ಕೆಲಸ ಮಾಡುತ್ತೆ UPI ತಂತ್ರಜ್ಞಾನ? ಇಲ್ಲಿದೆ ತೆರೆಮರೆಯ ಅಸಲಿ ರಹಸ್ಯ!

​ಟ್ರಂಪ್ ‘ನಂಬಲಸಾಧ್ಯ’ ನೀತಿಗೆ ಪಾಕಿಸ್ತಾನ ಹೈರಾಣು: ಅಮೆರಿಕದೊಂದಿಗೆ ವ್ಯವಹರಿಸುವಾಗ ಎದುರಾಗುತ್ತಿದೆ ಭೀತಿ!

Kudligi Siddapura Morarji Desai Residential School Temporary Warehouse Inside View

ಶೇಂಗಾ ಗೋದಾಮಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ: ಮಕ್ಕಳ ಭವಿಷ್ಯಕ್ಕೆ ಕತ್ತಲೆಯ ಕಾರ್ಮೋಡ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ನು `UPI’ ಮೂಲಕವೂ ಗ್ರಾ.ಪಂ.ತೆರಿಗೆ ಪಾವತಿಸಬಹುದು !
KARNATAKA

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಇನ್ನು `UPI’ ಮೂಲಕವೂ ಗ್ರಾ.ಪಂ.ತೆರಿಗೆ ಪಾವತಿಸಬಹುದು !

By kannadanewsnow57

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಇನ್ನು ಮುಂದೆ ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಲು ಪಂಚಾಯಿತಿ ಕಚೇರಿಗಳಿಗೆ ಅಲೆಯಬೇಕಿಲ್ಲ. ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಈಗ ನೇರವಾಗಿ ನಿಮ್ಮ ಮೊಬೈಲ್‌ನಲ್ಲಿರುವ UPI ಆಪ್‌ಗಳ ಮೂಲಕವೇ ಸುಲಭವಾಗಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ತೆರಿಗೆ ಪಾವತಿಸುವ ಸರಳ ಹಂತಗಳು ಇಲ್ಲಿವೆ:

UPI ಮೂಲಕ ತೆರಿಗೆ ಪಾವತಿಸುವುದು ಹೇಗೆ?

ಆಪ್ ತೆರೆಯಿರಿ: ನಿಮ್ಮ ಮೊಬೈಲ್‌ನಲ್ಲಿರುವ PhonePe, Google Pay, BHIM ಅಥವಾ Paytm ಆಪ್ ಅನ್ನು ಓಪನ್ ಮಾಡಿ.

ಸರ್ಚ್ ಮಾಡಿ: ಆಪ್‌ನಲ್ಲಿರುವ ‘Bills & Recharge’ ಅಥವಾ ‘Payments’ ವಿಭಾಗಕ್ಕೆ ಹೋಗಿ ‘RDPR (Bapuji Seva Kendra)’ ಎಂದು ಹುಡುಕಿ ಅದರ ಮೇಲೆ ಕ್ಲಿಕ್ ಮಾಡಿ.

ಐಡಿ ದಾಖಲಿಸಿ: ನಿಮ್ಮ 18 ಅಂಕಿಯ ‘Property ID’ (ಪ್ರಾಪರ್ಟಿ ಐಡಿ) ಅನ್ನು ನಮೂದಿಸಿ ‘Proceed’ ನೀಡಿ. ಆಗ ತೆರಿಗೆ ಪಾವತಿದಾರರ ಹೆಸರು ಮತ್ತು ಬಾಕಿ ಇರುವ ಮೊತ್ತ ಪರದೆಯ ಮೇಲೆ ಕಾಣಿಸುತ್ತದೆ.

ಪಾವತಿ ಪೂರ್ಣಗೊಳಿಸಿ: ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ದುಕೊಂಡು, UPI PIN ನಮೂದಿಸುವ ಮೂಲಕ ಹಣ ಪಾವತಿಸಿ.

ಪಾವತಿ ರಸೀದಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

ತೆರಿಗೆ ಪಾವತಿಸಿದ ನಂತರ ಅಧಿಕೃತ ರಸೀದಿಯನ್ನು ಆನ್‌ಲೈನ್ ಮೂಲಕವೇ ಪಡೆಯಬಹುದು:

ಬಾಪೂಜಿ ಸೇವಾ ಕೇಂದ್ರದ ಅಧಿಕೃತ ವೆಬ್‌ಸೈಟ್‌ಗೆ https://bsk.karnataka.gov.in/BSK/cs/loadDownlodeReceipt ಭೇಟಿ ನೀಡಿ.

ವೆಬ್‌ಸೈಟ್‌ನಲ್ಲಿ ‘Service’ ಡ್ರಾಪ್-ಡೌನ್ ಮೆನುವಿನಲ್ಲಿ ‘Property Tax’ ಆಯ್ಕೆ ಮಾಡಿ.

ನಿಮ್ಮ 18 ಅಂಕಿಯ ಪ್ರಾಪರ್ಟಿ ಐಡಿ ದಾಖಲಿಸಿ ‘Search’ ಬಟನ್ ಕ್ಲಿಕ್ ಮಾಡಿ.

ತೆರಿಗೆ ಪಾವತಿಯ ವಿವರಗಳು ಕಾಣಿಸಿದಾಗ, ಕೊನೆಯಲ್ಲಿರುವ ‘Action’ ವಿಭಾಗದಲ್ಲಿ ‘Download’ ಬಟನ್ ಒತ್ತುವ ಮೂಲಕ PDF ರಸೀದಿಯನ್ನು ಪಡೆದುಕೊಳ್ಳಬಹುದು.

ಗಮನಿಸಿ: ಸಾರ್ವಜನಿಕರು ಈ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಸಮಯ ಉಳಿತಾಯ ಮಾಡಬಹುದು ಮತ್ತು ಪಾರದರ್ಶಕವಾಗಿ ತೆರಿಗೆ ಪಾವತಿಸಬಹುದು ಎಂದು ಇಲಾಖೆ ತಿಳಿಸಿದೆ.

Good news for the rural people of the state: Now you can pay Gram Panchayat tax through `UPI' too!
Share. Facebook Twitter LinkedIn WhatsApp Email

Related Posts

Kudligi Siddapura Morarji Desai Residential School Temporary Warehouse Inside View

ಶೇಂಗಾ ಗೋದಾಮಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ: ಮಕ್ಕಳ ಭವಿಷ್ಯಕ್ಕೆ ಕತ್ತಲೆಯ ಕಾರ್ಮೋಡ

5 Mins Read
móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

3 Mins Read

ಸಿಎಂ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್; ಅವಹೇಳನಕಾರಿ ಪೋಸ್ಟ್ ಕೇಸ್​​ ರದ್ದುಗೊಳಿಸಿದ ಹೈಕೋರ್ಟ್ | CM DK Shivakumar

2 Mins Read
Recent News

​ಕಣ್ಣು ಮುಚ್ಚಿ ಬಿಡುವುದರೊಳಗೆ ಹಣ ವರ್ಗಾವಣೆ! ಹೇಗೆ ಕೆಲಸ ಮಾಡುತ್ತೆ UPI ತಂತ್ರಜ್ಞಾನ? ಇಲ್ಲಿದೆ ತೆರೆಮರೆಯ ಅಸಲಿ ರಹಸ್ಯ!

​ಟ್ರಂಪ್ ‘ನಂಬಲಸಾಧ್ಯ’ ನೀತಿಗೆ ಪಾಕಿಸ್ತಾನ ಹೈರಾಣು: ಅಮೆರಿಕದೊಂದಿಗೆ ವ್ಯವಹರಿಸುವಾಗ ಎದುರಾಗುತ್ತಿದೆ ಭೀತಿ!

Kudligi Siddapura Morarji Desai Residential School Temporary Warehouse Inside View

ಶೇಂಗಾ ಗೋದಾಮಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ: ಮಕ್ಕಳ ಭವಿಷ್ಯಕ್ಕೆ ಕತ್ತಲೆಯ ಕಾರ್ಮೋಡ

móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

State News
Kudligi Siddapura Morarji Desai Residential School Temporary Warehouse Inside View KARNATAKA

ಶೇಂಗಾ ಗೋದಾಮಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ: ಮಕ್ಕಳ ಭವಿಷ್ಯಕ್ಕೆ ಕತ್ತಲೆಯ ಕಾರ್ಮೋಡ

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 5 Mins Read

ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗುಡೇಕೋಟೆ ಗ್ರಾಮದಲ್ಲಿ ಪರಿಶಿಷ್ಟ ಪಂಗಡದ ಬಡ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಆರಂಭಿಸಲಾದ…

móbile-bidi-pustaka-hidi-campaign-bagepalli-government-high-school

ಬಾಗೇಪಲ್ಲಿ ಶಾಲೆಯಲ್ಲಿ ಮೊಬೈಲ್ ಗೀಳು ಮುಕ್ತ ಓದಿನ ಅಭಿಯಾನ

ಸಿಎಂ ಡಿ.ಕೆ ಶಿವಕುಮಾರ್ ಗೆ ಬಿಗ್ ರಿಲೀಫ್; ಅವಹೇಳನಕಾರಿ ಪೋಸ್ಟ್ ಕೇಸ್​​ ರದ್ದುಗೊಳಿಸಿದ ಹೈಕೋರ್ಟ್ | CM DK Shivakumar

pampanur-temple-hundi-mother-in-law-viral-note

VIRAL NEWS : ಅತ್ತೆ ಶೀಘ್ರದಲ್ಲಿ ಸಾಯಲಿ ಎಂದು ದೇವರ ಹುಂಡಿಗೆ ಇಪ್ಪತ್ತು ರೂಪಾಯಿ ನೋಟಿನೊಂದಿಗೆ ಪತ್ರ ಬರೆದ ಸೊಸೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.