ಬೆಂಗಳೂರು: ತೀವ್ರ ವಿರೋಧದ ಬೆನ್ನಲೇ ಪಂಪ ಮಹಾಕವಿ ಹೆಸರು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೈಬಿಟ್ಟಿದೆ.
ಏನಿದು ವಿವಾದ?
ಬೆಂಗಳೂರಿನ ಹೆಸರಾಂತ ಏರಿಯಾಗಳಲ್ಲಿ ಒಂದಾಗಿರುವ ಚಾಮರಾಜಪೇಟೆಯ ಮಿಂಟೊ ಆಸ್ಪತ್ರೆ ಮತ್ತು ಮಕ್ಕಳ ಕೂಟ ಉದ್ಯಾನದ ನಡುವಣ ರಸ್ತೆಗೆ ‘ಸಾಹಿತ್ಯ ಪರಿಷತ್ ರಸ್ತೆ’ ಎಂದು ಹೆಸರು ಇಡುವ ಬಗ್ಗೆ ಮಹೇಶ್ಜೋಶಿ ಮುಂದಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಕೆಲಸ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದ ಹಾಗೇ ಜನತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ವಿರುದ್ದ ಕಿಡಿಕಾರಲು ಶುರುಮಾಡಿದ್ದರು. ಈ ನಡುವೆ ಹೆಸರು ಬದಲಾವಣೆಗೆ ವಿರೋಧ ಕಂಡು ಬಂದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತಮ್ಮ ನಿರ್ಧಾರದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.