ಬೆಂಗಳೂರು : ರಾಜ್ಯದ ಇತಿಹಾಸದಲ್ಲೇ ವಿಧಾನಸಭೆ ಕಲಾಪದಿಂದ ಮೊದಲ ಬಾರಿಗೆ 18 ಶಾಸಕರನ್ನು ಅಮಾನತುಗೊಳಿಸಲಾಗಿದೆ. ಈ ಒಂದು ಅಮಾನತುಗೊಂಡ ಶಾಸಕರಿಗೆ ಸರ್ಕಾರ ನೀಡುತ್ತಿರುವ ಹಲವು ಸವಲತ್ತುಗಳನ್ನು ಕಟ್ ಮಾಡಲಾಗುತ್ತದೆ ಎನ್ನಲಾಗಿದೆ.
ಹೌದು ಸ್ಪೀಕರ್ ಪೀಠಕ್ಕೆ ಅಗೌರವ ತೋರಿ ಅಡ್ಡಿಪಡಿಸಿರುತ್ತಾರೆ. ಅಮಾನತುಗೊಂಡ ಶಾಸಕರಿಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ಅಮಾನತು ಆದಂತಹ ಸದಸ್ಯರು ತಕ್ಷಣ ಸದನದಿಂದ ಹೊರ ನಡೆಯಬೇಕು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಆದೇಶ ಹೊರಡಿಸಿದರು.
ವಿಧಾನಸಭೆಯಿಂದ ಈ ವೇಳೆ ಶಾಸಕರನ್ನು ಮಾರ್ಷಲ್ ಗಳು ಎತ್ತಿಕೊಂಡು ಹೊರ ನಡೆದರು. ಒಬ್ಬೊಬ್ಬರನ್ನು ಎತ್ತಿಕೊಂಡು ಬಂದು ಮಾರ್ಷಲ್ ಗಳು ಹೊರಹಾಕಿದ್ದಾರೆ. ಬಿಜೆಪಿ ಶಾಸಕರಾದ ಮುನಿರತ್ನ, ಚನ್ನಬಸಪ್ಪ, ಬೈರತಿ ಬಸವರಾಜು, ಬಿ ಸುರೇಶ್ ಗೌಡ, ಡಾ. ಭರತ್ ಶೆಟ್ಟಿ, ಧೀರಜ್ ಮುನಿರಾಜು, ಸಿ ಕೆ ರಾಮಮೂರ್ತಿಯನ್ನು ಸದನದಿಂದ ಮಾರ್ಷಲ್ ಗಳು ಎತ್ತಿಕೊಂಡು ಹೊರ ಹಾಕಿದ್ದಾರೆ.
ಮೊದಲ ಬಾರಿ ಆರು ತಿಂಗಳ ಕಾಲ ಬಿಜೆಪಿಯ 18 ಶಾಸಕರು ಅಮಾನತುಗೊಂಡಿದ್ದಾರೆ.
ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ 6 ತಿಂಗಳುಗಳ ಕಾಲ ಅಮಾನತು ಮಾಡಲಾಗಿದೆ. ಮುಂದಿನ ಆರು ತಿಂಗಳು ಕಾಲ ವಿಧಾನಸಭೆ ಪ್ರಾಂಗಣ ಪ್ರವೇಶಕ್ಕೆ ಅವಕಾಶ ಇಲ್ಲ. ಅಮಾನತಾದ ಶಾಸಕರಿಗೆ ಯಾವುದೇ ರೀತಿಯಾದ ಟಿಎ ಡಿಎ ನಡೆದಂತೆ ಆದೇಶ ನೀಡಲಾಗಿದೆ.ಅಲ್ಲದೆ ಸ್ಥಾಯಿ ಸಮೀತಿ ಸಭೆಗಳಿಗೂ ಕೂಡ ಅವಕಾಶ ಇಲ್ಲ. ಅಮಾನತಿನ ಅವಧಿಯಲ್ಲಿ ಶಾಸಕರು ನೀಡುವ ಸೂಚನೆಗೆ ಮಾನ್ಯತೆ ಇಲ್ಲ ಶಾಸಕರ ದಿನದ ಭತ್ಯೆಗೂ ಸಹ ಕೊಕ್ ನೀಡಲಾಗಿದೆ.