ಬೀದರ್ : ಬೀದರ್ ನ ಜಿ ಎನ್ ಡಿ ಕಾಲೇಜು ಕಾರ್ಯಕ್ರಮದಲ್ಲಿ ಜೈ ಶ್ರೀ ರಾಮ್ ಹಾಡು ಹಾಕಿದ್ದಕ್ಕೆ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ 17 ವಿದ್ಯಾರ್ಥಿಗಳ ವಿರುದ್ಧ ಬೀದರ್ ನ ಗಾಂಧಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು ಇಂದು ಬೀದರ್ ನ ಮೈಲೂರು ಕ್ರಾಸ್ ಬಳಿ ಇರುವ ಜಿ ಏನ್ ಡಿ ಡಿಗ್ರಿ ಕಾಲೇಜಿನಲ್ಲಿ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಹೊಡೆದಾಟ ಸಂಬಂಧ ಇದೀಗ 17 ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಾಗಿದೆ. ಎರಡು ಸಮುದಾಯದ ವಿದ್ಯಾರ್ಥಿಗಳಿಂದ ದೂರು ಮತ್ತು ಪ್ರತಿದೂರು ದಾಖಲಾಗಿದೆ ಎಂದು ಬೀದರ್ ಎಸ್ ಪಿ ಚನ್ನಬಸವಣ್ಣ ರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಬೀದರ್ ನ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಗಾಯಗೊಂಡಿದ್ದ ವಿದ್ಯಾರ್ಥಿಗಳಿಬ್ಬರ ದೂರಿನ ಮೇರೆಗೆ ಇದೀಗ ಕೇಸ್ ದಾಖಲಾಗಿದೆ.ಹಲ್ಲೆ ಪ್ರಕರಣದಲ್ಲಿ ಭಾಗಿಯಾದ 17 ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.ನಾಳೆ ಕಾಲೇಜಿನಲ್ಲಿ ಬಿಳ್ಕೊಡುಗೆ ಹಾಗೂ ಸ್ವಾಗತ ಕಾರ್ಯಕ್ರಮವನ್ನು ಇದೀಗ ಕಾಲೇಜು ಆಡಳಿತ ಮಂಡಳಿ ರದ್ದು ಮಾಡಿದೆ ಎಂದು ಬೀದರ್ ಎಸ್ ಪಿ ಚನ್ನಬಸವಣ್ಣ ಅವರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.