ಬೆಂಗಳೂರು: ಅಕ್ರಮವಾಗಿ ಹಣ ಲೂಟಿ ಮಾಡಲು ಮುಂದಾದ ಅಬಕಾರಿ ಇಲಾಖೆ ಇದೀಗ ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ತಾಯಿ ಭುವನೇಶ್ವರಿಗೆ ಅವಮಾನ ಮಾಡಲಾಗಿದೆ. ಕನ್ನಡಾಂಬೆ ಭುವನೇಶ್ವರಿ
ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ಬೆಂಗಳೂರಿನ ಬಾರ್, ವೈನ್ಸ್, ಪಬ್ಗಳಿಗೆ ದುವಾರಿ ಬೆಲೆಗೆ ಫೋಟೋವನ್ನು ನೀಡಿರುವುದು ಕೇಳಿಬಂದಿದೆ.
₹ 1 ಸಾವಿರದಿಂದ ₹ 5 ಸಾವಿರದವರೆಗೆ ಹಣ ಪಡೆಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಚಿತ್ರಗಳಲ್ಲಿರುವ ಕನ್ನಡಾಂಬೆ ಭುವನೇಶ್ವರಿಯ ಪ್ರತೀಕವಾಗಿರುವ ಕಲಾಕೃತಿಗಳಲ್ಲಿ ಕನ್ನಡ ಬಾವುಟದ ಬದಲು ಬೇರೊಂದು ಬಾವುಟ ಕಾಣಿಸಿಕೊಂಡಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ. ಹಲವು ಬಾರ್ ಮಾಲೀಕರು ಸಹ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಮಾಡುವ ಧಾವಂತದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭುವನೇಶ್ವರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಕನ್ನಡ ರಾಜ್ಯೋತ್ಸವ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು ಭುವನೇಶ್ವರಿಯ ಕೈಗೆ ಕೆಂಪು-ಹಳದಿಯ ಕನ್ನಡ ಬಾವುಟದ ಬದಲು ಬೇರೆ ಬಾವುಟ ನೀಡಿದ್ದಾರೆ ಎಂದು ದೂರಲಾಗಿದೆ. ಭುವನೇಶ್ವರಿ ಫೋಟೋ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಚಿಹ್ನೆಯೂ ಇದೆ.