ಧಾರವಾಡ: ನಗರದಲ್ಲಿ ತನ್ನ ಪಾಡಿಗೆ ತಾನು ಮೂಲಂಗಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಪತ್ನಿಯನ್ನು ಪತಿಯೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.
HEALTH TIPS: ಬೆಳಗ್ಗೆ ಯೋಗ ಮಾಡುವುದರಿಂದ ಏಷ್ಟೇಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ಮಾಹಿತಿ
42 ವರ್ಷದ ಮಂಜವ್ವ ಪಠಾದ್ ಮೃತ ದುರ್ದೈವಿ. ಪತಿ ಗದಿಗೆಪ್ಪ ಎಂಬಾತ ಆಕೆಯನ್ನು ಕೊಲೆ ಮಾಡಿದ್ದಾನೆ. ಆಕೆಯ ಗಂಡ ಕುಡಿತದ ಚಟ್ಟಕ್ಕೆ ಬಿದ್ದಿದ್ದ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಗಂಡ- ಹೆಂಡ್ತಿ ಜಗಳ ಮಾಡಿಕೊಳ್ಳುತ್ತಿದ್ದರು. ಕಳೆದ ರಾತ್ರಿ ಕೂಡಾ ಪತಿ, ಪತ್ನಿ ನಡುವೆ ಜಗಳ ಆಗಿತ್ತು. ಆದರೆ ಇಂದು ಮಂಜವ್ವ ಹೊಲದಲ್ಲಿ ಮೂಲಂಗಿ ತೊಳೆಯುವಾಗ ಗದಿಗೆಪ್ಪ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
HEALTH TIPS: ಬೆಳಗ್ಗೆ ಯೋಗ ಮಾಡುವುದರಿಂದ ಏಷ್ಟೇಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ಮಾಹಿತಿ
ಗದಿಗೆಪ್ಪ ಈ ಹಿಂದೆ ಕೂಡಾ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಹೊಲದ ವಿಚಾರವಾಗಿ ಒಂದು ಕೊಲೆ ಮಾಡಿ ಜೈಲು ಸೇರಿದ್ದ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೇ ಈತ ಸೆರೆವಾಸ ಮುಗಿಸಿ ಜೈಲಿನಿಂದ ಹೊರ ಬಂದಿದ್ದ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.