ಮೈಸೂರು : ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನು ಸಿಗದೆ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳು ವಿಚಾರಣೆಗೆಂದು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ತೆರಳಿದ ವೇಳೆ ಭವಾನಿ ರೇವಣ್ಣ ಅಲ್ಲಿರಲಿಲ್ಲ. 15 ದಿನಗಳ ಹಿಂದೆಯೇ ಅವರು ನಿಗೂಢ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಇದೀಗ SIT ಅಧಿಕಾರಿಗಳು ಮೈಸೂರಿನ 5 ಸ್ಥಳಗಳಲ್ಲಿ ಭವಾನಿ ರೇವಣ್ಣ ಅವರಿಗೆ ಹುಡುಕಾಟ ನಡೆಸಿದ್ದಾರೆ. ಹಾಸನದ ಮೈಸೂರು ಜಿಲ್ಲೆಯಲ್ಲಿ 5 ಕಡೆ ಹುಡುಕಾಟ ನಡೆಸಿದ್ದಾರೆ. ಸಹೋದರಿ ಮಗನ ಮನೆ ಫಾರ್ಮ್ ಹೌಸ್ ಪರಿಚಯ ಗುತ್ತಿಗೆದಾರ ಹಾಗೂ ಫಾರ್ಮ್ ಹೌಸ್ ಸೇರಿದಂತೆ ಅವರ ಪರಿಚಯಸ್ಥರ ಮನೆಯಲ್ಲಿ SIT ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಭವಾನಿ ರೇವಣ್ಣಗೆ ಎಸ್ಐಟಿ ಎರಡೆರಡು ನೋಟಿಸ್ ಕೊಟ್ಟಿತ್ತು. ಮನೆಯಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಭವಾನಿ ಪತ್ರ ಬರೆದಿದ್ದರು. ಹಾಗಾಗಿ ಇಂದು ಬೆಳಿಗ್ಗೆಯಿಂದ ಪತ್ರದಂತೆ ಎಸ್ಐಟಿ ಅಧಿಕಾರಿಗಳು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ಬಂದಿದ್ದಾರೆ. ಆದರೆ, ಮನೆಯೊಳಗೆ ಹೋದ ಎಸ್ಐಟಿ ಅಧಿಕಾರಿಗಳಿಗೆ ಶಾಕ್ ಕಾದಿದೆ. ಭವಾನಿ ರೇವಣ್ಣ ಮನೆಯಲ್ಲಿದ್ದ ಇರದ ಕಾರಣ, ಸಂಜೆ 5ವರೆಗೆ ಕಾದು ಇದೀಗ ಅವರಿಗಾಗಿ ಮೈಸೂರಿನ 5 ಕಡೆ ಹುಡುಕಾಟ ನಡೆಸಿದ್ದಾರೆ.