ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ ‘ಭಾರತ್ ಜೋಡೋ ಯಾತ್ರೆ’ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಭಾರತ್ ಜೋಡೋ ಪಾದಯಾತ್ರೆಯಲ್ಲಿ 30 ಸಾವಿರ ಮಂದಿ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ.
ಶುಕ್ರವಾರ ಕರ್ನಾಟಕ ಪ್ರವೇಶಿಸಲಿರುವ ಈ ಯಾತ್ರೆಯು ರಾಜ್ಯ ಕಾಂಗ್ರೆಸ್ಗೆ ಹೊಸ ಹುರುಪು ನೀಡಿದೆ., ಕಾಂಗ್ರೆಸ್ ನಾಯಕರೆಲ್ಲರೂ ಗುಂಡ್ಲುಪೇಟೆ ಪಟ್ಟಣದತ್ತ ಮುಖ ಮಾಡಿದ್ದಾರೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಪಟ್ಟಣದಲ್ಲಿದ್ದಾರೆ. ಇನ್ನು ಹಲವಾರು ನಾಯಕರು ಗುರುವಾರ ರಾತ್ರಿ ಬಂಡೀಪುರ ರೆಸಾರ್ಟ್ ಹಾಗೂ ಕಾಟೇಜ್ಗಳಲ್ಲಿ ತಂಗಿದ್ದಾರೆ. ಇನ್ನುಳಿದ ನಾಯಕರು ಶುಕ್ರವಾರ ಮುಂಜಾನೆಯೇ ಪಟ್ಟಣಕ್ಕೆ ಬರಲಿದ್ದಾರೆ. ಒಟ್ಟಾರೆ ಇಡೀ ರಾಜ್ಯ ಕಾಂಗ್ರೆಸ್ ಮುಖ್ಯ ನಾಯಕರೆಲ್ಲರೂ ಜಿಲ್ಲೆಯ ಗುಂಡ್ಲುಪೇಟೆಯತ್ತ ಬರಲಿದ್ದು, ಇಲ್ಲಿಂದ ರಾಹುಲ್ ಗಾಂಧಿ ಅವರ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಬುಧವಾರ ಹಾಗೂ ಗುರುವಾರ ಡಿ.ಕೆ ಶಿವಕುಮಾರ್ ಅವರು ಗುಂಡ್ಲುಪೇಟೆಯಲ್ಲಿ ಅಂತಿಮ ಹಂತದ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.
ಚಾಮರಾಜನಗರ ಜಿಲ್ಲೆಗೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಆಗಮಿಸಲಿದ್ದು, ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಸಿದ್ದತೆ ನಡೆಸಿದ್ದಾರೆ. ನಗರದ ಹಲವು ಕಡೆ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತ್ತಿದೆ.
ಭಾರತ್ ಜೋಡೋ ಪಾದಯಾತ್ರೆಯಲ್ಲಿ 30 ಸಾವಿರ ಮಂದಿ ಕಾರ್ಯಕರ್ತರು
ತಮಿಳುನಾಡಿನ ಗೂಡಲೂರು ಕಡೆಯಿಂದ ರಾಜ್ಯ ಪ್ರವೇಶ. ಬಂಡೀಪುರ ಗಡಿಯಿಂದ ವಾಹನದಲ್ಲಿ ಗುಂಡ್ಲುಪೇಟೆಗೆ ಬೆಳಗ್ಗೆ 9ಕ್ಕೆ ರಾಹುಲ್ ಹಾಗೂ ಅವರ ಸಹವರ್ತಿಗಳ ಆಗಮನವಾಗಲಿದ್ದು, ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಎದುರಿನ ಖಾಸಗಿ ಜಾಗದಲ್ಲಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಕನಿಷ್ಠ 25ರಿಂದ 30 ಸಾವಿರ ಮಂದಿ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಗುಂಡ್ಲುಪೇಟೆ ಪಟ್ಟಣದ ಹೊರ ವಲಯದ ಶನೇಶ್ವರ ದೇವಾಲಯದ ಬಳಿಯಲ್ಲಿ ವೇದಿಕೆ ನಿರ್ಮಿಸಲಾಗಿದ್ದು, ಬುಡಕಟ್ಟು ಜನರು ಹಾಗೂ ಚಾಮರಾಝನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೆ ರಾಹುಲ್ ಸಂವಾದ ನಡೆಸಲಿದ್ದಾರೆ. ಸಂವಾದದ ನಂತರ ಪಾದಯಾತ್ರೆ ಮುಂದುವರಿಯಲಿದ್ದು, ಸಂಜೆ ವೇಳೆಗೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಬಳಿ ಶುಕ್ರವಾರ ಪಾದಯಾತ್ರೆ ಅಂತ್ಯವಾಗಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಇದರ ನಡುವೆ ನಿನ್ನೆ ಗುಂಡ್ಲುಪೇಟೆಯಲ್ಲಿ ಕಿಡಿಗೇಡಿಗಳು ಭಾರತ್ ಜೋಡೋ ಯಾತ್ರೆಯ ಸ್ವಾಗತ ಫ್ಲೆಕ್ಸ್ ಗಳನ್ನು ಹರಿದು ಹಾಕಿದ್ದರು. . ಭಾರತ್ ಜೋಡೋ ಯಾತ್ರೆ ಆಗಮಿಸಲಿರುವ ಹಿನ್ನೆಲೆ ಸ್ವಾಗತ ಕೋರಿ ಫ್ಲೆಕ್ಸ್ ಗಳನ್ನು ಹಾಕಲಾಗಿತ್ತು. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ ‘ಭಾರತ್ ಜೋಡೋ ಯಾತ್ರೆ’ ದೇಶದ ರಾಜಕೀಯ ಇತಿಹಾಸದಲ್ಲಿ ತಿರುವು ನೀಡಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದರು.
BIGG NEWS : ‘ಭಾರತ್ ಜೋಡೋ ಯಾತ್ರೆ’ ಎಂಟ್ರಿ ಹೊತ್ತಲ್ಲೇ ಗುಂಡ್ಲುಪೇಟೆಯಲ್ಲಿ ‘ಲೋಕಾಯುಕ್ತ ರೈಡ್’
BREAKING NEWS : ನೇಣುಬಿಗಿದ ಸ್ಥಿತಿಯಲ್ಲಿ ಮುಂಬೈನ ಹೋಟೆಲ್ ನಲ್ಲಿ ಮಾಡೆಲ್ ಶವ ಪತ್ತೆ |Model Found Hanging