ರಾಯಚೂರು: ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಸಚಿವ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
BIGG NEWS: ಕಾರವಾರದಲ್ಲಿ ಕೋಮು ಸಂಘರ್ಷಕ್ಕೆ ಯತ್ನ; ಇಬ್ಬರು ಹಿಂದೂ ಕಾರ್ಯಕರ್ತರು ಅರೆಸ್ಟ್
ಇದು ಭಾರತ್ ಜೋಡೋ ಯಾತ್ರೆಯಲ್ಲ, ಇದುಫ್ಯಾಮಿಲಿ ಪ್ಯಾಕ್ ಯಾತ್ರೆ ಎಂದು ಕಿಡಿಕಾರಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಕೂಡ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿದರು. ಆದರೆ ಏನಾಯಿತು? ಬಂಡೆ ಎಂದು ಕರೆಯುತ್ತೀರಲ್ಲಾ ಡಿ.ಕೆ ಶಿವಕುಮಾರ್ ಪಾದಯಾತ್ರೆ ಮಾಡಿದ್ರು ಆನಾದ್ರೂ ಬದಲಾವಣೆಯಾಯಿತಾ? ಈಗ ರಾಹುಲ್ ಗಾಂಧಿ ಎಲ್ಲರೂ ಸೇರ ಭಾರತ್ ಜೋಡೊ ಮಾಡುತ್ತಿದ್ದಾರೆ.
BIGG NEWS: ಕಾರವಾರದಲ್ಲಿ ಕೋಮು ಸಂಘರ್ಷಕ್ಕೆ ಯತ್ನ; ಇಬ್ಬರು ಹಿಂದೂ ಕಾರ್ಯಕರ್ತರು ಅರೆಸ್ಟ್
ಇದೂ ಕೂಡ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಈಗ ಹಸು, ಕರು ಗುರುತು ಮತ್ತೆ ಬಂದಿದೆ. ಎಲ್ಲರೂ ಬಂದು ಪಾದಯಾತ್ರೆ ಮಾಡಿದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲ್ಲ. ಸಿದ್ದರಾಮಯ್ಯ ಪ್ರಧಾನಿ ಮೋದಿ ಬಗ್ಗೆ ಮಾತನಾಡುತ್ತಾರೆ ಎಂದರು. ಪಾಕಿಸ್ತಾನಕ್ಕೆ ಹೋಗಿ ಕೇಳಿ ಮೋದಿ ಯಾರೆಂದು ಹೇಳ್ತಾರೆ. ಚೀನಾಗೆ ಹೋಗಿ ಕೇಳಿ ಅವರೂ ಹೇಳುತ್ತಾರೆ ಎಂದು ಗುಡುಗಿದರು.