ನವದೆಹಲಿ: ಈಗಾಗಲೇ ಕೊರೋನಾ ಸೋಂಕಿಗೆ ಇಂಜೆಕ್ಷನ್ ಮೂಲಕ ನೀಡುವಂತ ಲಸಿಕೆ ಜಾಲ್ತಿಯಲ್ಲಿದೆ. ಈ ಲಸಿಕೆಯನ್ನು ಮಕ್ಕಳಿಂದ ವಯಸ್ಕರವರೆಗೆ ನೀಡಲಾಗುತ್ತಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಣಕ್ಕೂ ತರಲಾಗಿದೆ. ಇದೀಗ ಮೂಗಿನ ಮೂಲಕ ಹಾಕುವಂತ ಭಾರತ್ ಬಯೋಟೆಕ್ ನ ಕೋವಿಡ್ ಲಸಿಕೆಗೆ ಡಿಸಿಜಿಐ ಅನುಮೋದನೆ ನೀಡಿದೆ.
BIGG NEWS : ವಿದ್ಯುತ್, ಶಿಕ್ಷಣ ಕ್ಷೇತ್ರದಲ್ಲಿ ಭಾರತ-ಬಾಂಗ್ಲಾ ಒಪ್ಪಂದ : ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ
ಇಂದು ಭಾರತ್ ಬಯೋಟೆಕ್ನ ಮೂಗಿನ ಕೋವಿಡ್ -19 ಲಸಿಕೆ ( Bharat Biotech’s nasal Covid-19 vaccine ) ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ ನೀಡಲಾಗಿದೆ. ಇದು ಭಾರತದಲ್ಲಿಯೇ ಮೂಗಿನ ಮೂಲಕ ನೀಡುವಂತ ಕೋವಿಡ್ ಮೊದಲ ಲಸಿಕೆಯಾಗಿದೆ.
ಭಾರತ್ ಬಯೋಟೆಕ್ ಇಂಟ್ರಾನಾಸಲ್ ಕೋವಿಡ್ -19 ಲಸಿಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drugs Controller General of India – DCGI) ನಿಂದ ತುರ್ತು ಬಳಕೆಯ ಅಧಿಕಾರವನ್ನು ಪಡೆದುಕೊಂಡಿದೆ.
Bharat Biotech gets emergency use authorisation from DCGI for intranasal #COVID19 vaccine: Union Health Minister Dr Mansukh Mandaviya
This will be India's first nasal vaccine for COVID pic.twitter.com/LZDoVwa5bI
— ANI (@ANI) September 6, 2022