ನವದೆಹಲಿ : ನಾವು 2023ಕ್ಕೆ ಪ್ರವೇಶಿಸಿದ್ದೇವೆ. ಇದರೊಂದಿಗೆ ಕೆಲವು ನಿಯಮಗಳು ಸಹ ಕಟ್ಟುನಿಟ್ಟಾಗಿದ್ದು, ಇದನ್ನ ಸಾಮಾನ್ಯ ಜನರು ಅನುಸರಿಸ್ಲೇಬೇಕಾಗುತ್ತೆ. ಅದ್ರಂತೆ, ವಾಹನಗಳಲ್ಲಿನ ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನ ಡಿಸೆಂಬರ್ 31, 2022 ರೊಳಗೆ ಪೂರ್ಣಗೊಳಿಸಬೇಕಾಗಿತ್ತು. ಆದ್ರೆ, ಇದನ್ನ ನಿರ್ಲಕ್ಷಿಸಿದವ್ರಿಗೆ ಇನ್ಮುಂದೆ 5,000 ರೂ.ಗಳಿಂದ 10,000 ರೂ.ವರೆಗೆ ದಂಡ ವಿಧಿಸಬಹುದು.
ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳ ಪ್ರಕಾರ, ಸರ್ಕಾರವು ಎಲ್ಲಾ ವಾಹನಗಳಿಗೆ ಹೆಚ್ಚಿನ ಭದ್ರತೆಯ ನೋಂದಣಿ ಫಲಕಗಳು (HSRP) ಮತ್ತು ಬಣ್ಣ-ಕೋಡೆಡ್ ಸ್ಟಿಕ್ಕರ್ಗಳನ್ನ ಕಡ್ಡಾಯಗೊಳಿಸಿದೆ. ಡಿಸೆಂಬರ್ 31ರ ಗಡುವು ಮುಗಿದ ನಂತ್ರ ಏಪ್ರಿಲ್ 1, 2019ಕ್ಕಿಂತ ಮೊದಲು ನೋಂದಾಯಿಸಿದ ಎಲ್ಲಾ ವಾಹನಗಳು ಈಗ ಹೆಚ್ಚಿನ ಭದ್ರತೆಯ ನಂಬರ್ ಪ್ಲೇಟ್ಗಳು ಮತ್ತು ಕಲರ್ ಕೋಡೆಡ್ ಸ್ಟಿಕ್ಕರ್ಗಳನ್ನ ಹೊಂದಿರಬೇಕು. ಈ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನ ಹೊಂದಿರದ ವಾಹನಗಳಿಗೆ ಭಾರಿ ದಂಡ ವಿಧಿಸಬಹುದು.
ಇನ್ನು ಪೆಟ್ರೋಲ್ ಮತ್ತು ಸಿಎನ್ಜಿ ವಾಹನಗಳ ಮೇಲೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್, ಡೀಸೆಲ್ ವಾಹನಗಳಿಗೆ ಕಿತ್ತಳೆ ಸ್ಟಿಕ್ಕರ್, ಎಲೆಕ್ಟ್ರಿಕ್ ವಾಹನಗಳ ಮೇಲೆ ಗ್ರೀನ್ ಸ್ಟಿಕ್ಕರ್ ಇರಬೇಕು. ನಾಲ್ಕು ಚಕ್ರದ ವಾಹನಗಳಿಗೆ HSRP ಅಳವಡಿಸಲು 600 ರಿಂದ 1100 ರೂಪಾಯಿ. ಇನ್ನು ದ್ವಿಚಕ್ರ ವಾಹನಗಳಿಗೆ 365 ರೂಪಾಯಿ ನಿಗದಿಪಡಿಸಲಾಗಿದೆ.
ಕಾರು ಕಳ್ಳತನವನ್ನ ತಡೆಯಲು HSRPಯನ್ನ ಕಡ್ಡಾಯಗೊಳಿಸಲಾಗಿದೆ. ಯಾಕಂದ್ರೆ, ಇದು ಕಳೆದುಹೋದ ಅಥವಾ ಕದ್ದ ವಾಹನಗಳನ್ನ ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ.
HSRPಗೆ ಅರ್ಜಿ ಸಲ್ಲಿಸುವುದು ಹೇಗೆ?
* ವಾಹನ ಮಾಲೀಕರು ಮೊದಲು ಅಧಿಕೃತ ವೆಬ್ಸೈಟ್ bookmyhsrp.com ನಲ್ಲಿ ನೋಂದಾಯಿಸಿಕೊಳ್ಳಬೇಕು.
* ವೆಬ್ ಸೈಟ್’ಗೆ ಲಾಗ್ ಆನ್ ಆಗಿ. ನಂತ್ರ ಆಯ್ಕೆಗಳಿಂದ ಖಾಸಗಿ/ಸಾರ್ವಜನಿಕ ಸಾರಿಗೆಯನ್ನ ಆಯ್ಕೆಮಾಡಿ.
* ಪೆಟ್ರೋಲ್, ಡೀಸೆಲ್, ಸಿಎನ್ಜಿ, ಎಲೆಕ್ಟ್ರಿಕ್, ಸಿಎನ್ ಜಿ ಪೆಟ್ರೋಲ್ ನಡುವೆ ಸರಿಯಾದ ಇಂಧನ ಪ್ರಕಾರವನ್ನ ಆರಿಸಿ.
* ಕಾರು, ಸ್ಕೂಟರ್, ಮೋಟಾರ್ ಬೈಕ್, ಆಟೋ ಇತ್ಯಾದಿಗಳಿಂದ ವಾಹನ ವರ್ಗವನ್ನ ಆಯ್ಕೆ ಮಾಡಿ.
* ಬ್ರಾಂಡ್’ನ ನಿರೀಕ್ಷಿತ ವಿವರಗಳು, ನಂತರ ರಾಜ್ಯ ಮತ್ತು ಡೀಲರ್ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ
* ಈಗ ನೀವು ರಾಜ್ಯಗಳಿಗೆ ಆಯ್ಕೆಯನ್ನ ಆಯ್ಕೆ ಮಾಡಬೇಕು, ಅದರ ನಂತ್ರ ನೀವು ಡೀಲರ್ ವಿವರಗಳನ್ನ ನೋಡುತ್ತೀರಿ
* ನೋಂದಣಿ ಸಂಖ್ಯೆ, ದಿನಾಂಕ, ಎಂಜಿನ್ ಕ್ರಮ ಸಂಖ್ಯೆ, ಚಾಸಿಸ್ ಸಂಖ್ಯೆಯಂತಹ ವಾಹನದ ಬಗ್ಗೆ ಅಗತ್ಯ ಮಾಹಿತಿಯನ್ನ ನಮೂದಿಸಿ.
* ಅಗತ್ಯವಿರುವಂತೆ ನಿಮ್ಮ ವೈಯಕ್ತಿಕ ವಿವರಗಳನ್ನ ಭರ್ತಿ ಮಾಡಿ.
* ವೆಹಿಕಲ್ HSRP ಗಾಗಿ ಬುಕಿಂಗ್ ದಿನಾಂಕ, ಸಮಯದ ವಿವರಗಳನ್ನ ನಮೂದಿಸಿ
* ಇಡೀ ಪ್ರಕ್ರಿಯೆಯು ಒಟಿಪಿ ಉತ್ಪಾದನೆಯೊಂದಿಗೆ ಕೊನೆಗೊಳ್ಳುತ್ತದೆ. ನಂತ್ರ ರಸೀದಿಯನ್ನ ಡೌನ್ ಲೋಡ್ ಮಾಡಿ ಮತ್ತು ಫ್ರಿಂಟ್ ಔಟ್ ತೆಗೆದುಕೊಳ್ಳಿ.
BIGG UPDATE : ‘ಸಿದ್ದೇಶ್ವರ ಸ್ವಾಮೀಜಿ’ ಆರೋಗ್ಯ ಸ್ಥಿತಿ ಗಂಭೀರ : ಆಶ್ರಮದ ಮುಂದೆ ಸಾವಿರಾರು ಭಕ್ತರ ಜಮಾವಣೆ
‘ಪಕ್ಕದ್ಮನೆಯಲ್ಲಿ ಗಂಡು ಹುಟ್ಟಿದಾಗ ಪೇಡೆ ಹಂಚಿದ್ರೆ ಉಪಯೋಗ ಇಲ್ಲ’ : ಕಾಂಗ್ರೆಸ್ ಗೆ ಪ್ರಲ್ಹಾದ್ ಜೋಶಿ ಟಾಂಗ್