ರಾಯಚೂರು : ರಾಜ್ಯದಲ್ಲಿ ನಕಲಿ ಸಾಧು ಸಂತರ ಹಾವಳಿ ಹೆಚ್ಚಾಗಿದ್ದು, ಸಾಧು ಸಂತರ ಸೋಗಿನಲ್ಲಿ ಬಂದು ಚಿನ್ನ ಹಣ ಲೂಟಿ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಈ ಒಂದು ಕೃತ್ಯ ನಡೆದಿದೆ. ಸಿಂಧನೂರಿನಲ್ಲಿ ಸಾಧುಗಳ ಓಡಾಟ ಸಿಸಿಟಿವಿ ಕ್ಯಾಮೆರಾದಲ್ಲಿ ಸರಿಯಾಗಿದೆ.
ಸಿಂಧನೂರಿನ ಮೆಡಿಕಲ್ ಶಾಪ್ ಗೆ ಓರ್ವ ಸಾಧು ಬಂದಿದ್ದಾರೆ ನಿಮ್ಮ ಮಕ್ಕಳಿಗೆ ಒಳಿತಾಗಲಿ ಎಂದು ಹೂವು ನೀಡಿದ. ಹೂವಿನ ವಾಸನೆಗೆ ಅಂಗಡಿ ಮಾಲಿಕ ಮೂರ್ಛೆ ಹೋಗಿದ್ದಾನೆ. ಬಳಿಕ ಮಂಕು ಬಡಿದಂತಾಗಿದೆ. ಈ ವೇಳೆ ಸಾಧು ಅಂಗಡಿಯಲ್ಲಿದ್ದ 10 ಹಣವನ್ನು ಕುದು ಅಂಗಡಿ ಮಾಲೀಕ ಹಾಗೂ ಅವನ ಕೈಯಲ್ಲಿದ್ದ ಉಂಗುರವನ್ನು ಕೊಟ್ಟು ಕಳುಹಿಸಿದ್ದಾನೆ.
ಸಾಧು ಬಂದು ನನಗೆ ಎರಡು ಹೂ ಕೊಟ್ಟ, ನನಗೆ ಬಾಯಲ್ಲಿ ಮಾತೆ ಬರಲಿಲ್ಲ. ಅವನು ಏನು ಹೇಳುತ್ತಿದ್ದಾನೋ ಅವನ ಮಾತನ್ನು ಪ್ರತಿಯೊಂದು ಕೇಳಿದ್ದೇನೆ. 10 ಸಾವಿರ ಹಣ ಕೊಟ್ಟೆ ನನ್ನ ಕೈಯಲ್ಲಿರುವ ಉಂಗುರನೂ ಕೂಡ ಕೊಟ್ಟೆ. ಅವನು ಏನು ಹೇಳಿದನೋ ಎಲ್ಲವನ್ನು ಕೇಳಿದೆ. ನಾನು ಆ ಕ್ಷಣದಲ್ಲಿ ಏನು ಮಾಡುತ್ತಿದ್ದೇನೆ ಎಂದು ನನಗೆ ಅರಿವಿರಲಿಲ್ಲ ಎಂದು ಅಂಗಡಿ ಮಾಲೀಕ ತಿಳಿಸಿದರು. ಈ ಬಗ್ಗೆ ಸಿಂಧನೂರು ಟೌನ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ ಸಿಸಿಟಿವಿ ದೃಶ್ಯವನ್ನು ಆಧರಿಸಿ ಆರೋಪಿಗಳ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ.








