ಬೆಂಗಳೂರು: ಈಗ ದಾಖಲೆಗಳನ್ನು ಕೊಟ್ರೆ ಸಾಕು ಮೊಬೈಲ್ ಸಿಮ್ ಕಾರ್ಡ್ ( Mobile Sim Card ) ಎಲ್ಲೆಂದರಲ್ಲಿ ಖರೀದಿಸಬಹುದಾಗಿದೆ. ನಿಮಗೆ ಯಾವ ನೆಟ್ವರ್ಕ್ ಸಿಮ್ ಬೇಕಾದ್ರೂ ಕ್ಷಣಾರ್ಧದಲ್ಲಿ ಸಿಗುತ್ತದೆ. ಆದ್ರೇ ಹೀಗೆ ಸಿಗುತ್ತೆ ಅಂತ ರಸ್ತೆ ಬದಿಯಲ್ಲಿ ಎಲ್ಲಾ ಸಿಮ್ ಕಾರ್ಡ್ ( Sim Card ) ಖರೀದಿಸೋ ಮುನ್ನಾ ಎಚ್ಚರ. ಯಾಕೆ ಎನ್ನುವ ಬಗ್ಗೆ ಮುಂದೆ ಓದಿ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗ್ರಾಹಕರು ಸಿಮ್ ಕಾರ್ಡ್ ಗಾಗಿ ಕೊಟ್ಟ ದಾಖಲೆಯಿಂದಲೇ ಬೇರೆಯವರಿಗೆ ಅದೇ ದಾಖಲೆಯಿಂದಲೇ ಸಿಮ್ ಕಾರ್ಡ್ ಮಾರಾಟ ಮಾಡುತ್ತಿರೋ ಖತರ್ನಾಕ್ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಅಧಿಕಾರಿಗಳು ಆರೋಪಿ ಮಲ್ಲಿಕಾರ್ಜುನ್ ಎಂಬಾತನನ್ನು ಬಂಧಿಸಲಾಗಿದೆ. ಈತ ಬಸವನಗರ ಬಳಿಯ ಪುಟ್ ಪಾತ್ ನಲ್ಲಿ ಜಿಯೋ ಸಿಮ್ ಮಾರಾಟ ಮಾಡುತ್ತಿದ್ದು, ಸಿಮ್ ಕಾರ್ಡ್ ಪೋರ್ಟ್ ಮಾಡಿಸೋದಕ್ಕಾಗಿ ಬರೋ ಗ್ರಾಹಕರಿಗೆ ಗೊತ್ತಾಗದಂತೆ, ಅವರ ಆಧಾರ್ ಕಾರ್ಡ್ ನಂಬರ್, ಭಾವಚಿತ್ರದೊಂದಿಗೆ, ಬೇರೊಬ್ಬರಿಗೆ ಸಿಮ್ ಕಾರ್ಡ್ ನೀಡುತ್ತಿದ್ದ ಎನ್ನಲಾಗಿದೆ.
ಕಾಂಗ್ರೆಸ್ ತಾಕತ್ತು ದಮ್ಮು ಹಾನಗಲ್ ಉಪ ಚುನಾವಣೆಯಲ್ಲಿ ಜನರೇ ಬೊಮ್ಮಾಯಿಗೆ ತೋರಿಸಿದ್ದಾರೆ – ರಮೇಶ್ ಬಾಬು
ಬಂಧಿತ ಆರೋಪಿ ಮಲ್ಲಿಕಾರ್ಜುನ್ ಬಳಿಯಲ್ಲಿ 85 ಆಕ್ಟೀವ್ ಸಿಮ್, 24 ಸಿಮ್, ಕೃತ್ಯಕ್ಕೆ ಬಳಸುತ್ತಿದ್ದಂತ ಎರಡು ಮೊಬೈಲ್ ಗಳನ್ನು ಸಿಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.