Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

21/04/2026 7:41 AM

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

21/04/2026 7:33 AM

ALERT : ಆಹಾರ ಪ್ಯಾಕ್ ಮಾಡಲು `ಅಲ್ಯೂಮಿನಿಯಂ ಫಾಯಿಲ್’ ಬಳಸುವವರೇ ಎಚ್ಚರ : ಇದು ಕಿಡ್ನಿ, ಲಿವರ್‌ ಗೆ ಹಾನಿ.!

21/04/2026 7:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG ALERT: ಎಚ್ಚರ.! ಸಮರ್ಪಕ ಪಡಿತರ ವಿತರಣೆ ಮಾಡದಿದ್ದರೇ ‘ನ್ಯಾಯಬೆಲೆ ಅಂಗಡಿ’ಗಳ ಲೈಸೆನ್ಸ್ ರದ್ದು
KARNATAKA

BIG ALERT: ಎಚ್ಚರ.! ಸಮರ್ಪಕ ಪಡಿತರ ವಿತರಣೆ ಮಾಡದಿದ್ದರೇ ‘ನ್ಯಾಯಬೆಲೆ ಅಂಗಡಿ’ಗಳ ಲೈಸೆನ್ಸ್ ರದ್ದು

By kannadanewsnow0920/01/2026 8:10 PM

ಶಿವಮೊಗ್ಗ : ಆಹಾರ ಭದ್ರತಾ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಇದನ್ನು ಖಾತ್ರಿಪಡಿಸುವ ಉದ್ದೇಶದಿಂದ ನಾಲ್ಕು ದಿನಗಳ ಜಿಲ್ಲಾ ಭೇಟಿ ಕೈಗೊಂಡಿದ್ದು ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್ ಕೃಷ್ಣ ತಿಳಿಸಿದರು.

ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಆಹಾರ ಆಯೋಗದ ಜಿಲ್ಲೆಯ ಭೇಟಿ ಮತ್ತು ಪರಿಶೀಲನೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಹಿಂದೆ ಆಹಾರದ ಕೊರತೆ ಇತ್ತು. ಇದೀಗ ಕೊರತೆ ಇಲ್ಲ, ಆಹಾರ ನಮ್ಮ ಹಕ್ಕಾಗಿದ್ದು ಆಹಾರ ಭದ್ರತೆ ಒದಗಿಸಲಾಗಿದೆ. ಆಹಾರ ಭದ್ರತಾ ಕಾಯ್ದೆಯು ಕಾನೂನಾತ್ಮಕ ಭದ್ರತೆ ನೀಡಿದ್ದು ಸರ್ಕಾರದ ವಿವಿಧ ಆಹಾರ ಯೋಜನೆಗಳ ಪರಿಣಾಮಕಾರಿ ಅನುಷ್ಟಾನದ ಕುರಿತು ಪರಿಶೀಲನೆ ನಡೆಸಲಾಗುವುದು. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಎಲ್ಲಾ ಹಂತದಲ್ಲಿಯೂ ಕಾಯ್ದೆಯು ಸಮರ್ಪಕವಾಗಿ ಅನುಷ್ಟಾನವಾಗಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.

ನ್ಯಾಯಬೆಲೆ ಅಂಗಡಿಗಳ ಕುರಿತು ಹೆಚ್ಚಿನ ದೂರುಗಳಿವೆ. ನ್ಯಾಯಬೆಲೆ ಅಂಗಡಿಗಳು ಸಮರ್ಪಕವಾಗಿ ಪಡಿತರ ವಿತರಣೆ ಮಾಡಬೇಕು. ತಿಂಗಳಲ್ಲಿ 26 ದಿನಗಳ ಕಾಲ ಅಥವಾ ಎಲ್ಲ ಪಡಿತರದಾರರಿಗೆ ಪಡಿತರ ವಿತರಣೆ ಆಗುವವರೆಗೆ ತೆರೆದಿರಬೇಕು.

75 ವರ್ಷ ತುಂಬಿದ ವೃದ್ದರಿಗೆ ಅವರ ಮನೆ ಬಾಗಿಲಿಗೆ ಪಡಿತರ ತಲುಪಿಸಬೇಕು. ಈ ಅನ್ನ ಸುವಿಧಾ ಯೋಜನೆ ಜಾರಿಗೆ ಬಂದು 3 ತಿಂಗಳು ಆಗಿದ್ದು ಜಿಲ್ಲೆಯಲ್ಲಿ ಇದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರಿಗೆ ಬಯೋಮೆಟ್ರಿಕ್ ಸಮಸ್ಯೆ ಹೇಳಬಾರದು. ಮ್ಯಾನುವಲ್ ಆಗಿ ಬರೆದು ಪಡಿತರ ನೀಡಬೇಕು. ಪಿಎಂ ಪೋಷಣ್ ಅಭಿಯಾನ, ಬಿಸಿಯೂಟ ಯೋಜನೆ, ವಸತಿ ನಿಲಯಗಳಲ್ಲಿ ಆಹಾರ, ಅಂಗನವಾಡಿಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ನೀಡುವ ಪೌಷ್ಟಿಕಾಂಶ ಆಹಾರ, ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಸೇರಿದಂತೆ ಸರ್ಕಾರ ನೀಡುವ ಎಲ್ಲ ಆಹಾರ ಯೋಜನೆಗಳು ಸಮರ್ಪಕವಾಗಿ ಮತ್ತು ಗುಣಮಟ್ಟದೊಂದಿಗೆ ಫಲಾನುಭವಿಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಮ್ಮ ಭೇಟಿ ಮತ್ತು ಪರಿಶೀಲನೆ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ ನಿನ್ನೆಯಿಂದ ಹಲವಾರು ಘಟಕಗಳಿಗೆ ಭೇಟಿ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಗಳು, ಸರ್ಕಾರಿ ವಸತಿ ನಿಲಯಗಳಿಗೆ ಭೇಟಿ ನೀಡಿ ಸೂಕ್ತ ನಿರ್ದೇಶನ ನೀಡಲಾಗಿದೆ. ಎಫ್‌ಸಿಐ ಗ್ರಾಮಾಂತರ ಮತ್ತು ನಗರ ಗೋದಾಮಿಗೆ ಭೇಟಿ ನೀಡಿದ್ದು 32 ಕ್ವಿಂಟಾಲ್ 43 ಕೆಜಿ ಅಕ್ಕಿ ಹೆಚ್ಚುವರಿಯಾಗಿ ದಾಸ್ತಾನಿರುವುದು ಕಂಡು ಬಂದಿದ್ದು, ದಾಸ್ತಾನು ತೆಗೆದುಕೊಂಡು ಹೋಗದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಸೂಕ್ತ ನಿರ್ದೇಶನ ನಿಡಲಾಗಿದೆ. ನಾಳೆವರೆಗೂ ಜಿಲ್ಲೆಯ ವಿವಿಧ ಘಟಕಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ನ್ಯಾಯಬೆಲೆ ಅಂಗಡಿಗಳ ಅಮಾನತಿಗೆ ಸೂಚನೆ : ಶಿವಮೊಗ್ಗ ನಗರದಲ್ಲಿ ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ವೇಳೆ ಹಲವಾರು ಲೋಪದೋಷಗಳು ಕಂಡು ಬಂದಿವೆ. ನ್ಯಾಯಬೆಲೆ ಅಂಗಡಿಗೆ ನಿಗದಿತ ವೇಳೆಯೊಳಗೆ ಪಡಿತರ ತಂದು ವಿತರಿಸದೇ ಇದ್ದ ಹಾಗೂ ಇತರೆ ಲೋಪದೋಷ ಕಂಡು ಬಂದ ಅಶೋಕ ನಗರದ ಮತ್ತು ಶೇಷಾದ್ರಿಪುರಂ ಹಾಗೂ ಅಣ್ಣಾನಗರದಲ್ಲಿರುವ ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲು ನಿರ್ದೇಶನ ನೀಡಿದ್ದು, ಗುತ್ಯಪ್ಪ ಕಾಲೋನಿ ಸೇರಿದಂತೆ ಎರಡು ನ್ಯಾಯಬೆಲೆ ಅಂಗಡಿಗಳಲ್ಲಿ ಲೋಪದೋಷ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂದ ಅವರು ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರ ಕುರಿತು ಸಂಪೂರ್ಣವಾದ ಮಾಹಿತಿಯುಳ್ಳ ಫಲಕ ಅಳವಡಿಸುವಂತೆ ಸೂಚಿಸಲಾಗಿದೆ ಎಂದರು.

ಭದ್ರಾವತಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದ ಸದಸ್ಯರು ಮಾತನಾಡಿ, ಒಂದೇ ಹಾಲಿನಲ್ಲಿ ನೂರಾರು ವಿದ್ಯಾರ್ಥಿಗಳು ಮಲಗುವ ವ್ಯವಸ್ಥೆ ಇದ್ದು, ವಸತಿ ಮತ್ತು ಆಹಾರದ ಬಗ್ಗೆ ವಿದ್ಯಾರ್ಥಿನಿಯರು ದೂರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಮಾರುತಿ ಎಂ ದೊಡ್ಡಲಿಂಗಣ್ಣವರ, ಸುಮಂತ ರಾವ್, ಕೆ ಎಸ್ ವಿಜಯಲಕ್ಷ್ಮಿ ಹಾಜರಿದ್ದರು.

SHOCKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಶಾಲಾ ಬಾಲಕಿ ಹಿಂಬಾಲಿಸಿ ಬಂದು ಕಿಡಿಗೇಡಿ ಕೀಟಲೆ

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಹೊಡೆದಾಡಿಕೊಂಡ ಕೈದಿಗಳು: ಕಲ್ಲಿನಿಂದ ಜಜ್ಜಿ ಗಾಯ

Share. Facebook Twitter LinkedIn WhatsApp Email

Related Posts

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

21/04/2026 7:41 AM3 Mins Read

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

21/04/2026 7:33 AM2 Mins Read

ALERT : ಆಹಾರ ಪ್ಯಾಕ್ ಮಾಡಲು `ಅಲ್ಯೂಮಿನಿಯಂ ಫಾಯಿಲ್’ ಬಳಸುವವರೇ ಎಚ್ಚರ : ಇದು ಕಿಡ್ನಿ, ಲಿವರ್‌ ಗೆ ಹಾನಿ.!

21/04/2026 7:28 AM1 Min Read
Recent News

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

21/04/2026 7:41 AM

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

21/04/2026 7:33 AM

ALERT : ಆಹಾರ ಪ್ಯಾಕ್ ಮಾಡಲು `ಅಲ್ಯೂಮಿನಿಯಂ ಫಾಯಿಲ್’ ಬಳಸುವವರೇ ಎಚ್ಚರ : ಇದು ಕಿಡ್ನಿ, ಲಿವರ್‌ ಗೆ ಹಾನಿ.!

21/04/2026 7:28 AM

​’ಈರುಳ್ಳಿ ತಿಂತೀನಿ, ಮೆದುಳನ್ನಲ್ಲ!’: ಪ್ರಧಾನಿ ಮೋದಿ ‘ಝಲ್ಮುರಿ’ ವಿಡಿಯೋ ವೈರಲ್; ಒಂದೇ ದಿನದಲ್ಲಿ 10 ಕೋಟಿಗೂ ಅಧಿಕ ವೀಕ್ಷಣೆ!

21/04/2026 7:23 AM
State News
KARNATAKA

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

By kannadanewsnow5721/04/2026 7:41 AM KARNATAKA 3 Mins Read

ಬೆಂಗಳೂರು: ವಿಕಲಚೇತನರ ಸಬಲೀಕರಣ ಮತ್ತು ಅವರ ಬದುಕಿಗೆ ಆಸರೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹಲವಾರು ಮಹತ್ವದ ಯೋಜನೆಗಳನ್ನು ಜಾರಿಗೆ…

ಗಮನಿಸಿ : ನೀವು ಮಲಗುವ ಭಂಗಿಯಿಂದಲೂ ತಿಳಿಯಬಹುದು ನಿಮ್ಮ ವ್ಯಕ್ತಿತ್ವ.! ಇಲ್ಲಿದೆ ಮಾಹಿತಿ

21/04/2026 7:33 AM

ALERT : ಆಹಾರ ಪ್ಯಾಕ್ ಮಾಡಲು `ಅಲ್ಯೂಮಿನಿಯಂ ಫಾಯಿಲ್’ ಬಳಸುವವರೇ ಎಚ್ಚರ : ಇದು ಕಿಡ್ನಿ, ಲಿವರ್‌ ಗೆ ಹಾನಿ.!

21/04/2026 7:28 AM

BIG NEWS : ಬ್ಯಾಂಕ್ ಮೆಮೊದಲ್ಲಿ ಸೀಲು-ಸಹಿ ಇಲ್ಲದಿದ್ದರೂ `ಚೆಕ್ ಬೌನ್ಸ್’ ಕೇಸ್ ಸಿಂಧು: ಹೈಕೋರ್ಟ್ ಐತಿಹಾಸಿಕ ತೀರ್ಪು

21/04/2026 7:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.