ನವದೆಹಲಿ : ಹಿಂದೂ ಧರ್ಮದಲ್ಲಿ, ಮಹಿಳೆಯರಿಗೆ ‘ದೇವತೆ’ ಎಂಬ ಸ್ಥಾನಮಾನವನ್ನ ನೀಡಲಾಗಿದ್ದು, ಅವರನ್ನ ಗೌರವಿಸೋದು ಎಲ್ಲಾ ಭಾರತೀಯರ ಧರ್ಮವಾಗಿದೆ. ಅದು ಕರ್ತವ್ಯವೂ ಹೌದು. ಆದ್ರೆ, ಇಂದಿನ ಸಮಾಜದಲ್ಲಿ, ಜನರು ಈ ಎಲ್ಲಾ ವಿಷಯಗಳನ್ನ ಅನುಸರಿಸುತ್ತಿಲ್ಲ. ಈಗ ಕೆಲವು ಪುಂಡರು, ಹುಡುಗಿಯರು ಮತ್ತು ಮಹಿಳೆಯರ ಬಗ್ಗೆ ಅಸಹ್ಯವಾದ ಕಾಮೆಂಟ್’ಗಳನ್ನ ಮಾಡುವುದು ಫ್ಯಾಷನ್ ಆಗಿದೆ. ಅವ್ರು ಮಹಿಳೆಯರ ಮೇಲೆ ಅಶ್ಲೀಲ ಕಾಮೆಂಟ್ ಮತ್ತು ಅಶ್ಲೀಲ ಸನ್ನೆಗಳನ್ನು ಮಾಡದಿದ್ರೆ, ಅವ್ರಿಗೆ ಸಮಾಧಾನ ಆಗೋದಿಲ್ಲ. ಪೊಲೀಸ್ ಆಡಳಿತವು ಅಂತಹ ಜನರ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದು, ಅಗತ್ಯವಿದ್ದಾಗ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದೆ. ಆದ್ರೆ, ಇದರ ಹೊರತಾಗಿಯೂ, ಅವರು ಸುಧರಿಸದಿದ್ದಾಗ, ಅಂತಹ ಜನರಿಗೆ ಐಪಿಸಿ ಅಡಿಯಲ್ಲಿ ಕಠಿಣ ಶಿಕ್ಷೆಗೆ ಅವಕಾಶವಿದೆ ಅನ್ನೋದು ನಿಮಗೆ ತಿಳಿದಿದೆಯೇ.?
ವಾಸ್ತವವಾಗಿ, ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (NCIB) ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದೆ ಮತ್ತು ಅದರ ಬಗ್ಗೆ ಪ್ರಮುಖ ಮಾಹಿತಿಯನ್ನ ನೀಡಿದೆ. ” ಚಮ್ಮಕ್ ಚಲ್ಲೋ, ಐಟಂ, ಮಾಟಗಾತಿ, ಚಾರಿತ್ರ್ಯಹೀನಳು ಅಂತೆಲ್ಲಾ ನಿಂದಿಸಿದ್ರೆ ಅಥವಾ ಅಶ್ಲೀಲ ಸನ್ನೆಗಳನ್ನ ತೋರಿಸಿ ಅವಮಾನಿಸಿದರೇ, ಐಪಿಸಿಯ ಸೆಕ್ಷನ್ 509 ರ ಅಡಿಯಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದು” ಎಂದು ಟ್ವೀಟ್’ನಲ್ಲಿ ತಿಳಿಸಲಾಗಿದೆ.
ಎನ್ಸಿಐಬಿಯ ಈ ಟ್ವೀಟ್ ನೋಡಿ.!
आवश्यक जानकारी :~
————————
यदि कोई व्यक्ति किसी स्त्री को आवरा, माल, छम्मक-छल्लो, आइटम, चुड़ैल, कलमुखी, चरित्रहीन जैसे शब्दों से संबोधित करता है या अश्लील इशारे करता है, जिससे उसके लज्जा का अनादर हो। तो उसे आईपीसी की धारा 509 के तहत 3 वर्ष तक जेल/ आर्थिक दण्ड या दोनों हो सकता है।— NCIB Headquarters (@NCIBHQ) December 16, 2022
ಡಿಸೆಂಬರ್ 16 ರಂದು ಮಾಡಿದ ಈ ಟ್ವೀಟ್ಗೆ ಇಲ್ಲಿಯವರೆಗೆ ಸಾವಿರಾರು ಲೈಕ್ಗಳು ಬಂದಿವೆ, ಆದರೆ ಬಳಕೆದಾರರು ವಿವಿಧ ರೀತಿಯ ಕಾಮೆಂಟ್ಗಳನ್ನ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರ, ‘3 ವರ್ಷಗಳಲ್ಲಿ ಏನಾಗುತ್ತದೆ, ನೀವು ಪುರುಷರ ಜೀವನವನ್ನ ಹಾಳುಮಾಡಬೇಕು, ನಂತರ ಪುರುಷರನ್ನ ನೇಣಿಗೇರಿಸಲು ಅವಕಾಶ ಮಾಡಿಕೊಡಬೇಕು’ ಎಂದಿದ್ದಾರೆ.
BIGG NEWS : ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿಕೆ
BIGG NEWS : ದೇಶದ ಮೊದಲ ‘ಬೃಹತ್ ಡ್ರೋನ್’ ಪ್ರದರ್ಶನ ; ಅಮರ ವೀರರ ವೀರೋಚಿತ ಕಥೆ ಅನಾವರಣ |Drone Show