ಚಿತ್ರದುರ್ಗ: ರೈತರು ಸಂಜೆ 06 ರಿಂದ ಬೆಳಿಗ್ಗೆ 06 ರವರೆಗಿನ ಅವಧಿಯಲ್ಲಿ ಸಿಂಗಲ್ ಫೇಸ್ ಕೃಷಿ ಪಂಪ್‍ಗಳನ್ನು ಬಳಸದಂತೆ ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಮನವಿ ಮಾಡಿದ್ದಾರೆ.
ರೈತರು ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಅನ್ನು ಕೃಷಿ ಪಂಪ್‍ಸೆಟ್‍ಗಳಿಗೆ ಬಳಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ರೈತರು ಸಂಜೆ 06 ರಿಂದ ಬೆಳಿಗ್ಗೆ 06 ರವರೆಗಿನ ಅವಧಿಯಲ್ಲಿ ಸಿಂಗಲ್ ಫೇಸ್ ಕೃಷಿ ಪಂಪ್‍ಗಳನ್ನು ಬಳಸಬಾರದು. ರೈತರ ಪಂಪ್ ಸೆಟ್‍ಗಳಿಗೆ ಹಗಲಿನ ವೇಳೆ 04 ಗಂಟೆ ಮತ್ತು ರಾತ್ರಿ ವೇಳೆ 03 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಹಾಗೂ ಗ್ರಾಮಾಂತರ ಪ್ರದೇಶದಲ್ಲಿನ ಮನೆಗಳಿಗೆ ನಿರಂತರ ಜ್ಯೋತಿ ಫೀಡರ್ ಮೂಲಕ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ.
ಇದನ್ನು ಹೊರತುಪಡಿಸಿ, ನೀರಾವರಿ ಫೀಡರ್‍ಗಳ ಮೂಲಕ ತೋಟದ ಮನೆಗಳಿಗೆ ಗೃಹಪಯೋಗಿ ಬಳಕೆಗೆ ಮಾತ್ರ ಹಾಗೂ ಅಲ್ಲಿ ವಾಸಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಿಂಗಲ್ ಫೇಸ್ ವಿದ್ಯುತ್ ಅನ್ನು ಸಂಜೆ 06 ರಿಂದ ಬೆಳಿಗ್ಗೆ 6 ವರೆಗೆ (ಮೂರು ಗಂಟೆಗಳ ಮೂರು ಫೇಸ್ ವಿದ್ಯುತ್ ಹೊರತಾತಿ) ಫೀಡರ್‍ಗಳಿಗೆ ಓಪನ್ ಡೆಲ್ಟಾ ಮೂಲಕ ನೀಡಲಾಗುವುದು.
ಆದರೆ ರಾತ್ರಿ ವೇಳೆ ಕೆಲವರು ಸಿಂಗಲ್ ಫೇಸ್ ಕೃಷಿ ಪಂಪ್‍ಸೆಟ್‍ಗಳನ್ನು ಫೀಡರ್ ಮೂಲಕ ಬಳಸುತ್ತಿರುವುದರಿಂದ, ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ. ಹೀಗಾಗಿ ರೈತರು ಸಂಜೆ 06 ರಿಂದ ಬೆಳಿಗ್ಗೆ 06 ರವರೆಗಿನ ಅವಧಿಯಲ್ಲಿ ಸಿಂಗಲ್ ಫೇಸ್ ಕೃಷಿ ಪಂಪ್‍ಗಳನ್ನು ಬಳಸಬಾರದು. ಈ ಮೂಲಕ ಬೆಸ್ಕಾಂ ನೊಂದಿಗೆ ರೈತರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
BREAKING: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ಭೀಕರ ಕಾಡ್ಗಿಚ್ಚು: ಹೊತ್ತಿ ಉರಿಯುತ್ತಿರುವ ಸಸ್ಯ ಸಂಪತ್ತು
ಚಾಂಪಿಯನ್ಸ್ ಟ್ರೋಫಿ 2025: ಪಾಕ್ ಸ್ಟೇಡಿಯಂಗಳಲ್ಲಿ ಭಾರತೀಯ ಧ್ವಜ ಇಲ್ಲ: ಪಿಸಿಬಿ ಸ್ಪಷ್ಟನೆ