ಬೆಂಗಳೂರು: ಬೆಸ್ಕಾಂನ ( BESCOM ) ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿನ (BMAZ) ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು, ಇದುವರೆಗೆ 2,85,941 ಲಕ್ಷ ಡಿಜಿಟಲ್ ಮೀಟರ್ಗಳನ್ನು ( Digital Meater ) ಅಳವಡಿಸಲಾಗಿದೆ.
ಡಿಎಲ್ಎಮ್ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು ಅಳವಡಿಸಲು ಎರಡು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು, ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿ ಬರುವ ಬೆಸ್ಕಾಂನ ಉತ್ತರ, ಪಶ್ಚಿಮ ಮತ್ತು ಪೂರ್ವ ವೃತ್ತಗಳಲ್ಲಿ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದ್ದು, ದಕ್ಷಿಣ ವೃತ್ತದಲ್ಲಿ ಕಾರ್ಯ ಇನ್ನಷ್ಟೆ ಆರಂಭಗೊಳ್ಳಬೇಕಾಗಿದೆ.
BIG NEWS: ರಾಜ್ಯ ಸರ್ಕಾರದಿಂದ ಏತ ನೀರಾವರಿ ಯೋಜನೆಗಳ ಕಾರ್ಯಾಚರಣೆ, ನಿರ್ವಹಣೆಯ ಕರಡು ನೀತಿ, ಮಾರ್ಗಸೂಚಿಗೆ ಅನುಮೋದನೆ
ಅಕ್ಟೋಬರ್ 17, 2022ರ ವೇಳೆಗೆ ಉತ್ತರ ವೃತ್ತ- 61333, ಪಶ್ಚಿಮ ವೃತ್ತ-1,10,909, ದಕ್ಷಿಣ ವೃತ್ತ- 2095 ಮತ್ತು ಪೂರ್ವ ವೃತ್ತದ ವ್ಯಾಪ್ತಿಯಲ್ಲಿನ ಗ್ರಾಹಕರಿಗೆ 1,11,604 ಸೇರಿ ಒಟ್ಟು 2,85,941 ಡಿಎಲ್ಎಮ್ ಎಸ್ ಸ್ಟ್ಯಾಟಿಕ್ ಸಿಂಗಲ್ ಫೇಸ್ ಮೀಟರ್ ಗಳನ್ನು ಅಳವಡಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ( BESCOM MD Mahanthesh Bilagi ) ತಿಳಿಸಿದ್ದಾರೆ.
ಮೀಟರ್ ಅಳವಡಿಕೆ ಕಾರ್ಯವನ್ನು ಎರಡು ಇಲೆಕ್ಟ್ರಿಕ್ ಕಂಪನಿಗಳಾದ ರಾಜೇಶ್ವರಿ ಇಲೆಕ್ಟ್ರಿಕಲ್ಸ್ ಮತ್ತು ವಿ.ಆರ್. ಪಾಟೀಲ್ ಇಲೆಕ್ಟ್ರಿಕಲ್ಸ್ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು, ರಾಜಶ್ರೀ ಇಲೆಕ್ಟ್ರಿಕಲ್ಸ್ ದಿನಕ್ಕೆ ಸರಾಸರಿ 3500 ರಿಂದ 3800 ಡಿಜಿಟಲ್ ಮೀಟರ್ ಅಳವಡಿಸುತ್ತಿದೆ. ಹಾಗೆಯೇ ವಿ.ಆರ್. ಪಾಟೀಲ್ ಇಲೆಕ್ಟ್ರಿಕಲ್ಸ್ ಕಂಪನಿ ದಿನಕ್ಕೆ ಸರಾಸರಿ 2000 ರಿಂದ 5000 ಮೀಟರ್ ಗಳನ್ನು ಅಳವಡಿಸುತ್ತಿದೆ. ಇದೀಗ ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದ್ದು, 3 ಫೇಸ್ ಮಿಟರ್ ಅಳವಡಿಕೆ ಕಾರ್ಯವನ್ನು ಇನ್ನಷ್ಟೆ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯದ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಎರಡೂ ಕಂಪನಿಗಳಿಗೆ ದಿನಕ್ಕೆ ಸರಾಸರಿ 12000 ಸಿಂಗಲ್ ಫೇಸ್ ಮೀಟರ್ ಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
BREAKING NEWS: ದಿಢೀರ್ ಸಿಎಂ ಬೊಮ್ಮಾಯಿಯವರ ಇಂದಿನ ಧಾರವಾಡ ಮತ್ತು ನಾಳೆಯ ಹಾವೇರಿ ಜಿಲ್ಲಾ ಪ್ರವಾಸ ರದ್ದು
ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವ್ಯಾಪ್ತಿಯಲ್ಲಿರುವ (BMAZ) 17,68,000 ಇಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾವಣೆ ಮಾಡುವ ಕಾರ್ಯ ಜುಲೈ ತಿಂಗಳಲ್ಲಿ ಆರಂಭಗೊಂಡಿದೆ.
ಬೆಸ್ಕಾಂನ ಬೆಂಗಳೂರು ಗ್ರಾಮಾಂತರ ಪ್ರದೇಶ ಮತ್ತು ಚಿತ್ರದುರ್ಗ ಪ್ರದೇಶ ವಲಯಗಳಲ್ಲಿ ಸುಮಾರು 9 ಲಕ್ಷ ಡಿಜಿಟಲ್ ಮೀಟರ್ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.
2024ರ ವೇಳೆಗೆ ಇಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸುವ ಕಾರ್ಯ ಪೂರ್ಣಗೊಳಲ್ಲಿದೆ ಎಂದರು.
ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಅನುಕುಲವಾಗುವ ಡಿಎಲ್ಎಮ್ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು ಅಳವಡಿಲಾಗುತ್ತಿದೆ.
ಡಿಎಲ್ಎಮ್ಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕ ಸ್ನೇಹಿಯಾಗಿದ್ದು ಸಿಂಗಲ್ ಫೇಸ್ ಅಥವ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ಬಳಕೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್ ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲವೆಂದು ತಿಳಿಸಿದರು.
ಹತ್ತು ವರ್ಷಗಳ ಹಿಂದೆ ಅಳವಡಿಸಿರುವ ಇಲೆಕ್ಟ್ರೋ ಮೆಕಾನಿಕಲ್ ಮೀಟರ್ ಗಳನ್ನು ಡಿಜಿಟಲ್ ಮೀಟರ್ ಗೆ ಬದಲಿಸಲಾಗುತ್ತಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದ್ದಾರೆ.
ಈ ಡಿಜಿಟಲ್ ಮೀಟರ್ ನ ಇನ್ನೊಂದು ಉಪಯೋಗವೇನೆಂದೆರೆ ಗ್ರಾಹಕರು ತಾವು ಎರಡು ವರ್ಷಗಳ ಹಿಂದಿನ ಅವಧಿಯವರೆಗೂ ಬಳಸಿದ ವಿದ್ಯುತ್ ಪ್ರಮಾಣದ ವಿವರಗಳನ್ನು ಬೆಸ್ಕಾಂ ಕಛೇರಿಯಿಂದ ಪಡೆದು ಅದನ್ನು ವಿದ್ಯುತ್ ಬಿಲ್ ಜೊತೆ ತುಲನೆ ಮಾಡಿ ತಾವು ಈಗ ಬಳಸಿರುವ ವಿದ್ಯುತ್ ಪ್ರಮಾಣ ಸರಿಯಾಗಿದೆಯೇ ಎಂದು ತಿಳಿಯಬಹುದಾಗಿದೆ.
ಎಲ್ಲಾ ವಿಭಾಗಳಲ್ಲಿ ಹಂತ ಹಂತವಾಗಿ ಡಿಜಿಟಲ್ ಮೀಟರ್ಗಳನ್ನು ಅಳವಡಿಸಲಾಗುವುದು. ಈ ಯೋಜನೆಯ ಒಟ್ಟು ಮೊತ್ತ 116.69 ಕೋಟಿ ರೂಪಾಯಿಗಳಾಗಿದ್ದು, ಸಿಂಗಲ್ ಫೇಸ್ ಡಿಜಿಟಲ್ ಮೀಟರ್ ಗೆ ತೆರಿಗೆ, ವೈರಿಂಗ್ ಮತ್ತು ಅಳವಡಿಕೆ ವೆಚ್ಚ ಸೇರಿ 1497 ರಿಂದ 1507 ರೂಪಾಯಿ ಮತ್ತು 3 ಫೇಸ್ ಮೀಟರ್ ಗೆ 3612 ರಿಂದ 3652 ರೂಪಾಯಿಗಳಾಗಲಿದ್ದು ಈ ವೆಚ್ಚವನ್ನು ಬೆಸ್ಕಾಂ ಭರಿಸಲಿದೆ ಎಂದುತಿಳಿಸಿದ್ದಾರೆ.