ಬೆಂಗಳೂರು: ಈಗಾಗಲೇ ವಿದ್ಯುತ್ ಬಿಲ್ ( Electricity Bill ) ಕಟ್ಟೋದಕ್ಕೆ ಆರು ತಿಂಗಳ ಕಾಲ ಸಮಯಾವಕಾಶವಿಲ್ಲ. ಇದೆಲ್ಲಾ ಸುಳ್ಳು, ವದಂತಿಯಾಗಿದೆ ಎಂಬುದಾಗಿ ಬೆಸ್ಕಾಂ ( BESCOM ) ಸ್ಪಷ್ಟಪಡಿಸಿತ್ತು. ಈ ಬೆನ್ನಲ್ಲೇ ವಿದ್ಯುತ್ ಕಳ್ಳತನ ( Electricity theft ) ಮಾಡುತ್ತಿದ್ದವರಿಗೆ ಬಿಗ್ ಶಾಕ್ ನೀಡಿ, ಸಂಗ್ರಹಿಸಿದ್ದು ಮಾತ್ರ ಕೋಟಿ ಕೋಟಿ ದಂಡವಾಗಿದೆ.
Karnataka Rains Updates: ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಈ ಬಗ್ಗೆ ಟ್ವಿಟ್ಟರ್ ನಲ್ಲಿ ( Twitter ) ಮಾಹಿತಿ ಹಂಚಿಕೊಂಡಿರುವಂತ ಬೆಸ್ಕಾಂ, ತನ್ನ ಕಾರ್ಯವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ನಿಯಂತ್ರಿಸೋದಕ್ಕಾಗಿ ವಿಶೇಷ ಜಾಗೃತ ದಳವನ್ನು ಹೊಂದಿದೆ. ಪ್ರಸಕ್ತ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 998 ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ಅಪರಾಧಿಗಳಿಗೆ ಸುಮಾರು 4.77 ಕೋಟಿ ದಂಡ ವಿಧಿಸಲಾಗಿದೆ ಎಂದು ತಿಳಿಸಿದೆ.
BIG NEWS: ಇಂದಿನಿಂದಲೇ ಮಳೆಗಾಲ ಮುಗಿಯುವವರೆಗೆ ಕೊಡಗು ಜಿಲ್ಲೆಗೆ ಈ ವಾಹನಗಳ ಪ್ರವೇಶಕ್ಕೆ ನಿಷೇಧ – ಜಿಲ್ಲಾಡಳಿತ ಆದೇಶ
ವಿದ್ಯುತ್ ಕಳ್ಳತವನ್ನು ಬೆಸ್ಕಾಂ ಸಮರ್ಪಕವಾಗಿ ನಿಯಂತ್ರಿಸುತ್ತಿದೆ. ನಿಮ್ಮ ಸಮೀಪದಲ್ಲಿ ವಿದ್ಯುತ್ ಜಾಲದ ದುರುಪಯೋಗ ಕಂಡುಬಂದಲ್ಲಿ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912ಗೆ ಕರೆಮಾಡಿ ತಿಳಿಸಿ ಎಂಬುದಾಗಿ ಮನವಿ ಮಾಡಿದೆ.
ತನ್ನ ವಿಶೇಷ #ಜಾಗೃತದಳದ ಮೂಲಕ ವಿದ್ಯುತ್ ಜಾಲದ ದುರುಪಯೋಗವನ್ನು ಬೆಸ್ಕಾಂ ಯಶಸ್ವಿಯಾಗಿ ನಿಯಂತ್ರಿಸುತ್ತಿದೆ!
ನಿಮ್ಮ ಸಮೀಪದಲ್ಲಿ ವಿದ್ಯುತ್ ಜಾಲದ ಯಾವುದೇ ರೀತಿಯ ದುರುಪಯೋಗ ಕಂಡುಬಂದಲ್ಲಿ, #ಬೆಸ್ಕಾಂನ 24×7 #ಸಹಾಯವಾಣಿ '1912'ಗೆ ಕರೆಮಾಡಿ ತಿಳಿಸಿ.@mdbescom @BescomHelpline @MinOfPower @mnreindia @karkalasunil @BSBommai pic.twitter.com/x9lrJPtUxG
— Namma BESCOM (ನಮ್ಮ ಬೆಸ್ಕಾಂ) (@NammaBESCOM) July 9, 2022