ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್ ಮೀಟರ್ ಅಳವಡಿಸೋದಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, 40 ಸಾವಿರ ಮುಂಗಡವಾಗಿ ಪಡೆಯುವ ವೇಳೆಯಲ್ಲಿಯೇ ಲೋಕಾಯುಕ್ತ ಪೊಲೀಸರ ಕೈಗೆ ಬೆಸ್ಕಾಂ ಎಇ ಸಿಕ್ಕಿಬಿದ್ದಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ಜನರೇ ತೀರ್ಮಾನಿಸಲಿದ್ದಾರೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಸ್ಕಾಂ ಉತ್ತರ ವಿಭಾಗದ ಎಇ ಆನಂದ್, ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರಾಜ್ಯ ಸರ್ಕಾರದಿಂದ ಉಚಿತವಾಗಿ ಈ ಮೀಟರ್ ಮನೆ ಮನೆಗೆ ಅಳವಡಿಸಲಾಗುತ್ತಿದೆ. ಆದ್ರೇ ಇಂತಹ ಎಲೆಕ್ಟ್ರೀಕ್ ಮೀಟರ್ ಅಳವಡಿಸೋದಕ್ಕೆ 50 ಸಾವಿರ ಲಂಚಕ್ಕೆ ಬೆಸ್ಕಾಂ ಎಇ ಆನಂದ್ ಬೇಡಿಕೆ ಇಟ್ಟಿದ್ದರು.
BREAKING NEWS: ಮುರುಘಾ ಶ್ರೀ ವಿರುದ್ಧ ಪಿತೂರಿ ಕೇಸ್: ‘ಸೌಭಾಗ್ಯ ಬಸವರಾಜನ್’ಗೆ 1 ದಿನ ಪೊಲೀಸ್ ಕಸ್ಟಡಿಗೆ
ಈ ಸಂಬಂಧ ವ್ಯಕ್ತಿಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇಂದು ಎಇ ಆನಂದ್ ಗೆ 50 ಸಾವಿರದಲ್ಲಿ 40 ಸಾವಿರ ಹಣವನ್ನು ಮುಂಗಡವಾಗಿ ರಾಜಾಜಿನಗರ ಮುಖ್ಯ ರಸ್ತೆಯಲ್ಲಿ ನೀಡಲಾಗುತ್ತಿತ್ತು.
ಪ್ರಿಯಾಂಕ್ ಖರ್ಗೆ ಅವರೇ PSI ಹಗರಣದಲ್ಲಿ ಬಂಧಿತರಾಗಿರುವವರು ನಿಮ್ಮ ಹಿಂಬಾಲಕರೇ – ಬಿಜೆಪಿ
ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್ ಪಿ ಅಶೋಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದರು. ಬೆಸ್ಕಾಂ ಎಇ ಆನಂದ್ ಅವರನ್ನು 40 ಸಾವಿರ ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಈ ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸುತ್ತಿದ್ದಾರೆ.