ಬೆಂಗಳೂರು: ಹೋಟೆಲ್ ಗೆ ತೆರಳಿ, ರೂಂ ನೀಡುವಂತೆ ಗಲಾಟೆ ಮಾಡಿ, ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದಂತ ಆರೋಪದ ಹಿನ್ನಲೆಯಲ್ಲಿ, ಬೆಂಗಳೂರಿನ ಕೆಪಿ ಅಗ್ರಹಾರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ.
ಹೆಚ್ಚಿನ ದರ ವಸೂಲಿ ಮಾಡಿದರೆ ಕಾನೂನು ಕ್ರಮ: ಖಾಸಗಿ ಬಸ್ ಮಾಲೀಕರಿಗೆ ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ
ಬೆಂಗಳೂರಿನ ಕೆಪಿ ಅಗ್ರಹಾರ ಠಾಣೆಯ ಇನ್ಸ್ ಪೆಕ್ಟರ್ ಗೋಪಾಲಕೃಷ್ಣಗೌಡ ಎಂಬುವರು ಕಳೆದ 5 ದಿನಗಳ ಹಿಂದೆ ಜೀವನ್ ಭೀಮಾ ನಗರ ಠಾಣೆ ವ್ಯಾಪ್ತಿಯ ಹೋಟೆಲ್ ಒಂದಕ್ಕೆ ತೆರಳಿದ್ದರು. ಹೋಟೆಲ್ ನಲ್ಲಿ ರೂಂ ನೀಡುವಂತೆ ಗಲಾಟೆ ಮಾಡಿದ್ದರು. ಇದಲ್ಲದೇ ಹೋಟೆಲ್ ನ ಮಹಿಳಾ ಸಿಬ್ಬಂದಿಗಳ ಜೊತೆಗೆ ಅನುಚಿತವಾಗಿಯೂ ವರ್ತಿಸಿದ್ದರು.
ಈ ಸಂಬಂಧ ಹೋಟೆಲ್ ನ ಮಹಿಳಾ ಸಿಬ್ಬಂದಿಗಳು ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ತೆರಳಿ, ಕೆಪಿ ಅಗ್ರಹಾರ ಠಾಣೆಯ ಇನ್ಸ್ ಪೆಕ್ಟರ್ ಗೋಪಾಲಕೃಷ್ಣಗೌಡ ಅನುಚಿತವಾಗಿ ವರ್ತಿಸಿದ ಸಂಬಂಧ ದೂರು ನೀಡಿದ್ದರು. ಈ ದೂರು ಪಡೆದಂತ ಪೊಲೀಸರು ಎನ್ ಸಿ ಆರ್ ನೀಡಿ ಕಳುಹಿಸಿದ್ದರು.
ಈ ಘಟನೆಯ ಸಂಬಂಧ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿಯವರು, ಕೆಪಿ ಅಗ್ರಹಾರ ಠಾಣೆ ಇನ್ಸ್ ಪೆಕ್ಟರ್ ಗೋಪಾಲಕೃಷ್ಣಗೌಡ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.