ಬೆಂಗಳೂರು : ಇಂದು ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಕನ್ನಡ ಭಾಷೆ ಮಾತನಾಡಿದಕ್ಕೆ ಕಾರ್ಮಿಕನ ಮೇಲೆ ಉತ್ತರ ಪ್ರದೇಶದ ಮೂವರು ಕಾರ್ಮಿಕರು ಹಲ್ಲೆ ನಡೆಸಿದ ವಿಚಾರವಾಗಿ, ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ ಕೆ ಬಾಬಾ ಸ್ಪಷ್ಟನೆ ನೀಡಿದ್ದು, ಈ ಗಲಾಟೆ ಭಾಷೆಗಾಗಿ ನಡೆದಿರುವಂತಹದ್ದಲ್ಲ, ಇದು ಪರಶಿವ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕಾರ್ಮಿಕರ ಮೇಲೆ ಹಲ್ಲೆ ಆರೋಪದ ವಿಚಾರವಾಗಿ ಭಾಷೆ ವಿಚಾರಕ್ಕೆ ಜಗಳವಾಗಿಲ್ಲ. ಪರ್ಫ್ಯೂಮ್ ವಿಚಾರಕ್ಕೆ ಜಗಳವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ನಲ್ಲಿ ಈ ಒಂದು ಗಲಾಟೆ ನಡೆದಿತ್ತು. ಕೃಷ್ಣಮೂರ್ತಿ ಎಂಬುವವರ ಕೈಮಗ್ಗದಲ್ಲಿ ಗಲಾಟೆ ನಡೆದಿತ್ತು.
ಕಾರ್ಮಿಕ ಶಿವಲಿಂಗ ಪರ್ಫ್ಯೂಮ್ ಹಾಕಿಕೊಂಡು ಬರುತ್ತಿದ್ದ. ಪರ್ಫ್ಯೂಮ್ ಸ್ಮೆಲ್ ತಡೆದುಕೊಳ್ಳಲು ಆಗುತ್ತಿಲ್ಲವೆಂದು ಗಲಾಟೆ ನಡೆದಿದೆ. ಇಬ್ಬರು ಕಾರ್ಮಿಕರ ನಡುವೆ ಮಾತಿನ ಚಕಮತಿ ನಡೆದು ಹಾಕ್ಲೆ ನಡೆದಿದೆ. ಮೂವರು ಕಾರ್ಮಿಕರು ಸೇರಿ ಓರ್ವನ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆಯ ಸಂಬಂಧ ಆನೇಕಲ್ ಪೊಲೀಸರಿಂದ ಮೂವರ ಬಂಧನವಾಗಿದೆ.
ಕನ್ನಡ ಹಿಂದಿ ಭಾಷೆ ವಿಚಾರಕ್ಕೆ ಕಾರ್ಮಿಕರ ನಡುವೆ ಜಗಳವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಉತ್ತರ ಪ್ರದೇಶದ ಕಾರ್ಮಿಕರಿಂದ ಕನ್ನಡನಿಗೆ ಥಳಿತವೆಂದು ವದಂತಿ ಹಬ್ಬಿಸಲಾಗಿದೆ. ಭಾಷೆ ವಿಚಾರಕ್ಕೆ ಗಲಾಟೆಯಾಗಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ.ಕೆ ಬಾಬಾ ಸ್ಪಷ್ಟನೆ ನೀಡಿದರು.