ಬೆಂಗಳೂರು : ಬೆಂಗಳೂರು ಕೇವಲ ತಂತ್ರಜ್ಞಾನದ ನಗರವಾಗಿರದೇ, ಮುಂದಿನ 5 ವರ್ಷಗಳಲ್ಲಿ ದೇಶದ ಆರ್ಥಿಕತೆಯ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
BIGG NEWS : ‘ಪಂಚರತ್ನ’ ಸಮಾವೇಶದಲ್ಲಿ ‘ಜೆಡಿಎಸ್’ ಸೋಲಿಗೆ ಕಾರಣ ಬಿಚ್ಚಿಟ್ಟ H.D ಕುಮಾರಸ್ವಾಮಿ |JDS Pancharatna
ಅವರು ಇಂದು ಬೆಂಗಳೂರು ಟೆಕ್ ಸಮ್ಮಿಟ್ 2022 ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಯೂನಿಕಾರ್ನ್ಗಳ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕರ್ನಾಟಕ ವಿದೇಶಿ ಬಂಡವಾಳ ಹೂಡಿಕೆ ಹಾಗೂ ಸ್ಟಾರ್ಟ್ ಅಪ್ ಗಳಲ್ಲಿ ಉತ್ತಮ ಸ್ಥಾನದಲ್ಲಿದೆ. ಬಿಯಾಂಡ್ ಬೆಂಗಳೂರು ಅಭಿವೃದ್ಧಿಯಾಗಬೇಕು. ಕೃಷಿ, ತಂತ್ರಜ್ಞಾನ, ಆರ್ಥಿಕತೆ ಹೀಗೆ ಎಲ್ಲ ರಂಗಗಳಲ್ಲಿಯೂ ಕರ್ನಾಟಕ ಹಾಗೂ ಬೆಂಗಳೂರು ಅತ್ಯುತ್ತಮ ಶ್ರೇಯಾಂಕ ಹೊಂದಿದೆ. ಇದರಿಂದಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ ಎಂದರು.
‘ಆಹಾರ-ಆರೋಗ್ಯ ಪ್ರಿಯ’ರಿಗೆ ಸುವರ್ಣಾವಕಾಶ: ನ.20ರಂದು ಯಲಹಂಕದಲ್ಲಿ ‘ವಿಶಿಷ್ಟ ಆಹಾರ ಮೇಳ- ಪ್ರಾತ್ಯಕ್ಷಿಕೆ’
ಆತ್ಮವಿಶ್ವಾಸವೇ ಟೆಕ್ ಸಮಿಟ್ ನ ಸ್ಪೂರ್ತಿ
ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವುದರ ಜೊತೆಗೆ ಪ್ರಥಮ ಸ್ಥಾನವನ್ನು ಕಾಯ್ದಿರಿಸಿಕೊಂಡಿರುವುದು ಸವಾಲಿನ ಕೆಲಸವಾಗಿದ್ದು, ಇದಕ್ಕಾಗಿ ದೊಡ್ಡ ಪ್ರಮಾಣದ ಪರಿಶ್ರಮ ಬೇಕಾಗಿದೆ. ಈ ನಿಟ್ಟಿನಲ್ಲಿ ನಾಡಿನ ಇಂಜಿನಿಯರ್ಸ್ ಹಾಗೂ ವಿಜ್ಞಾನಿಗಳು ಹಾಗೂ ಅವರ ಪರಿಶ್ರಮದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಆಧುನಿಕ ತಂತ್ರಜ್ಞಾನ ಮಾನವನ ಒಳಿತಿಗೆ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಬಳಕೆಯಾಗಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಬದಲಾವಣೆಯನ್ನು ತರಬಹುದು. ಸೋಲಿಗೆ ಹೆದರದೇ ಗೆಲ್ಲಲೇಬೇಕೆಂಬ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಈ ಆತ್ಮವಿಶ್ವಾಸವೇ ಟೆಕ್ ಸಮಿಟ್ ನ ಸ್ಪೂರ್ತಿಯಾಗಿದೆ. ಉದ್ಯಮಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸಫಲರಾದಾಗ ಮಾತ್ರ ಇಂದಿನ ಟೆಕ್ ಸಮಿಟ್ ಯಶಸ್ವಿಯಾಗುತ್ತದೆ. ಅನೇಕ ಪ್ರಮುಖ ಸಂಶೋಧನೆಗಳು ವೈಯಕ್ತಿಕವಾಗಿ ಆಗಿವೆಯೇ ಹೊರತು ಸಂಸ್ಥೆಯಿಂದಲ್ಲ ಎಂದರು.
ಟೆಕ್ ಸಮ್ಮಿಟ್ ಯಶಸ್ವಿ
ಬೆಂಗಳೂರಿನಲ್ಲಿ ಎಲ್ಲರೂ ಒಟ್ಟುಗೂಡಿ ಟೆಕ್ ಸಮ್ಮಿಟ್ ನ್ನು ಯಶಸ್ವಿಗೊಳಿಸಿದ್ದೇವೆ. ಇದನ್ನು ಮುಂದಕ್ಕೆ ಕೊಂಡೊಯ್ಯಬೇಕು. ಮೂರು ದಿನದ ಈ ಉತ್ಸವದ ಪಾಲಗೊಂಡವರ ಭಾವನೆಗಳೇನು ಎನ್ನುವುದು ಬಹಳ ಮುಖ್ಯ. ಚಿಂತನೆಗಳು ತಂತ್ರಜ್ಞಾನದ ಜೊತೆಗೂಡಿದೆ. ಕ್ರಿಯೆಗೆ ಗುರಿಯನ್ನು, ಅಭಿವೃದ್ಧಿಗೆ ಶ್ರಮ, ನಾಯಕತ್ವ, ಸುಸ್ಥಿರತೆ, ಸ್ನೇಹಕ್ಕೆ ಸಂಬಂಧ ಹಾಗೂ ಬೆಂಗಳೂರನ್ನು ಬೆಂಗಳೂರು ಭೇಟಿಯಾಗಿದೆ. ಬೆಂಗಳೂರು ಎಂದರೆ ಬಂಗಾರದ ಊರು. ಬಂಗಾರದಂಥ ಹೃದಯವುಳ್ಳ ಜನರ ನಗರವಿದು ಎಂದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್, ಐಟಿಬಿಟಿ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ , ಸ್ಟಾರ್ಟ್ ಅಪ್ ವಿಷನ್ ಗುಂಪಿನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಐಟಿಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣ ರೆಡ್ಡಿ, ಐಟಿಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.