ಬೆಂಗಳೂರು: ನಗರದಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮ ಸಂಬಂಧ, ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಇಂದು ಇದೇ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಬಂಧಿತರ ಸಂಖ್ಯೆ 12ಕ್ಕೆ ಏರಿದೆ.
‘ಅನುದಾನಿತ ಪದವಿ ಕಾಲೇಜು’ಗಳ ‘ಪ್ರಾಂಶುಪಾಲ’ರಿಗೆ ಗುಡ್ ನ್ಯೂಸ್: ಗಳಿಕೆ ರಜೆ ಮಂಜೂರು
ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಸಂಬಂಧ ಚಿಲುಮೆ ಸಂಸ್ಥೆಯ ಮಾಲೀಕ ರವಿಕುಮಾರ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಇಂದು ಪ್ರಮುಖ ಆರೋಪಿ ರವಿಕುಮಾರ್ ಜೊತೆಗೆ ಆಪ್ತನಾಗಿದ್ದಂತ ಅನಿಲ್ ಎಂಬಾತನನ್ನು ಬಂಧಿಸಲಾಗಿದೆ.
BIG NEWS: ‘KSRTC ನೂತನ ಬಸ್’ಗಳಿಗೆ ಹೆಸರು, ಟ್ಯಾಗ್ ಲೈನ್, ಗ್ರಾಫಿಕ್ಸ್ ನೀಡಿ ‘25 ಸಾವಿರ’ದವರೆಗೆ ಬಹುಮಾನ ಗೆಲ್ಲಿ
ಬಂಧಿತ ಆರೋಪಿ ಅನಿಲ್, ಮಹದೇವಪುರದಲ್ಲಿರುವಂತ ಚಿಲುಮೆ ಕಚೇರಿಯ ಉಸ್ತುವಾರಿ ವಹಿಸಿಕೊಂಡಿದ್ದನು. ಅಲ್ಲದೇ ಹಲವು ವರ್ಷಗಳಿಂದ ರವಿಕುಮಾರ್ ಜೊತೆಗೆ ಗುರುತಿಸಿಕೊಂಡಿದ್ದನು. ಇದಲ್ಲದೆ ನೌಕರರ ನೇಮಕ, ಲಾಟಿಸ್ಟಿಕ್ ವರ್ಕ್ ಸೇರಿದಂತೆ ಎಲ್ಲವೂ ಅನಿಲ್ ಅಧೀನದಲ್ಲೇ ನಡೆಯುತ್ತಿದ್ದವು.
BREAKING NEWS: ಆಂಧ್ರಪ್ರದೇಶ ಸಿಎಂ ಸಹೋದರಿ ವೈ.ಎಸ್ ಶರ್ಮಿಳಾ ಬಂಧನ | AP CM Sister YS Sharmila arrested
ವೋಟರ್ ಐಡಿ ಪರಿಷ್ಕರಣೆ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಅನಿಲ್ ನಾಪತ್ತೆಯಾಗಿದ್ದನು. ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಇಂದು ಪ್ರಕರಣ ಸಂಬಂಧ ಆರೋಪಿ ಅನಿಲ್ ನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿರೋದಾಗಿ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.