ಬೆಂಗಳೂರು: ನಗರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ- 2023ರ ಕಾರ್ಯಚಟುವಟಿಕೆಗಳ ಅಂಗವಾಗಿ ಮನೆ ಮನೆ ಸಮೀಕ್ಷೆ ಕಾರ್ಯವನ್ನು ನಡೆಸಲಾಗಿತ್ತು. ಈ ಸಮೀಕ್ಷೆ ಕಾರ್ಯದಲ್ಲಿ ಈವರೆಗೆ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.25ರಷ್ಟು ಸಮೀಕ್ಷೆ ಮುಗಿದಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಈ ಬಗ್ಗೆ ಬಿಬಿಎಂಪಿಯ ಚುನಾವಣಾ ಸಹಾಯಕ ಆಯುಕ್ತರು ಮಾಹಿತಿ ನೀಡಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ- 2023ರ ಕಾರ್ಯಚಟುವಟಿಕೆಗಳ ಅಂಗವಾಗಿ ದಿನಾಂಕ: 09.11.2022 ರಿಂದ ದಿನಾಂಕ: 08.12.2022 ರವರೆಗೆ ಬಿ.ಎಲ್.ಓ ಗಳಿಂದ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸಬೇಕಾಗಿರುತ್ತದೆ ಎಂದಿದ್ದಾರೆ.
‘ಬಿಜೆಪಿಗೆ ಕುಸ್ತಿ ಆಡಲು ರೌಡಿಗಳು ಬೇಕಾಗಿದ್ದಾರೆ’ : ಡಿ.ಕೆ ಶಿವಕುಮಾರ್ ವ್ಯಂಗ್ಯ
ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯವು ಚಾಲ್ತಿಯಲ್ಲಿದ್ದು, ದಿನಾಂಕ: 09.11.2022 ರಿಂದ 01.12.2022 ರವರೆಗೆ ಶೇ. 23 ರಷ್ಟು ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ಪ್ರಗತಿಯನ್ನು ಸಾಧಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ವಿಶೇಷ ಆಯುಕ್ತರು(ಚುನಾವಣೆ) ರವರು ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯ 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮನೆ ಮನೆ ಸಮೀಕ್ಷೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯವನ್ನು ಬಿ.ಎಲ್.ಓ ಗಳು ನಿರ್ವಹಿಸುವಂತೆ ಹಾಗೂ ಆಯೋಗದಿಂದ ನೀಡಲಾಗಿರುವ ನಿಗಧಿತ ಅವಧಿಯೊಳಗೆ ಸದರಿ ಕಾರ್ಯವನ್ನು ಪೂರ್ಣಗೊಳಿಸಲು ಎಲ್ಲಾ ಮತದಾರರ ನೊಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳು ರವರಿಗೆ ನಿರ್ದೇಶಿಸುವಂತೆ ತಿಳಿಸಿದ್ದಾರೆ.
BIG NEWS: ಬೆಸ್ಕಾಂನಿಂದ 24 ಗಂಟೆ ‘ವೆಬ್ ಪೋರ್ಟಲ್’ ಸೇವೆ ಪುನರಾರಂಭ: ಈ ಎಲ್ಲಾ ಸೌಲಭ್ಯ ಆನ್ ಲೈನ್ ನಲ್ಲೇ ಲಭ್ಯ