ಬೆಂಗಳೂರು: ನಗರದಲ್ಲಿ ಒಂದಾನೊಂದು ಕಾಲದಲ್ಲಿ ಭೂಗತ ಲೋಕದ ಡಾನ್ ಎಂಬುದಾಗಿಯೇ ಕರೆಸಿಕೊಂಡಿದ್ದಂತ ಬಿಬಿಎಂಪಿಯ ಮಾಜಿ ಸದಸ್ಯ ಚಕ್ರವರ್ತಿ ಕ್ರಿಸ್ಟೋಫರ್ ಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರ ಎಂಬುದಾಗಿ ತಿಳಿದು ಬಂದಿದೆ.
ಒಂದು ಕಾಲದಲ್ಲಿ ಬೆಂಗಳೂರಿನ ಭೂಗತ ಪಾತಕ ಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿದ್ದಂತವರೇ ಚಕ್ರವರ್ತಿ ಕ್ರಿಸ್ಟೋಫರ್ ಆಲಿಯಾಸ್ ಚಕ್ರೆ. ಈ ಬಳಿಕ ಭೂಗತಲೋಕದಿಂದ ಹೊರಬಂದು, ರಾಜಕಾರಣಕ್ಕೆ ಧುಮುಕಿದ್ದರು. ಬಿಬಿಎಂಪಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದವರೇ ಚಕ್ರೆ.
SM Krishna Health: ಹಿರಿಯ ನಾಯಕ ಎಸ್.ಎಂ ಕೃಷ್ಣ ಆರೋಗ್ಯವಾಗಿದ್ದಾರೆ – CM ಬೊಮ್ಮಾಯಿ ಸ್ಪಷ್ಟನೆ
ಇದೀಗ ಮಾಜಿ ಬಿಬಿಎಂಪಿ ಸದಸ್ಯ, ಭೂಗತಲೋಕದ ಮಾಜಿ ಡಾನ್ ಚಕ್ರೆಗೆ ಬ್ರೈನ್ ಸ್ಟ್ರೋಕ್ ಆಗಿರೋದಾಗಿ ತಿಳಿದು ಬಂದಿದೆ. ಅವರನ್ನು ಯಶವಂತಪುರದ ಬಳಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸಿಡಿಗೆ ತಡೆಯಾಜ್ಞೆ ತರುವಲ್ಲಿ ತೋರಿದ ಆಸಕ್ತಿ ಇಲಾಖೆಯ ಕೆಲಸದಲ್ಲಿ ತೋರಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ – ಕಾಂಗ್ರೆಸ್
ಐಸಿಯುನಲ್ಲಿ ಚಕ್ರವರ್ತಿ ಕ್ರಿಸ್ಟೋಫರ್ ಆಲಿಯಾಸ್ ಚಕ್ರೆ ಚಿಕಿತ್ಸೆ ಮುಂದುವರೆಸಿರುವಂತ ವೈದ್ಯರು, ಸದ್ಯಕ್ಕೆ ಏನೂ ಹೇಳೋದಕ್ಕೆ ಆಗೋದಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಸ್ಥಿತಿ ಚಿಂತಾಜನಕವಾಗಿರೋದಾಗಿ ತಿಳಿದು ಬಂದಿದೆ.