ಬೆಂಗಳೂರು: ನಗರದಲ್ಲಿ ಇದೀಗ ಭಾರೀ ಮಳೆಯಾಗುತ್ತಿದೆ. ಬಿರುಗಾಳಿ, ಗುಡುಗು ಸಹಿತ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಮೆಟ್ರೋ ರೈಲ್ವೆ ಹಳಿಯ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಈ ಹಿನ್ನಲೆಯಲ್ಲಿ ಇಂದ್ರನಗರದಿಂದ ವೈಟ್ ಫೀಲ್ಡ್ ಹಾಗೂ ಎಂಜಿ ರಸ್ತೆ ನಡುವಿನ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.
ಈ ಬಗ್ಗೆ ಬಿಎಂಆರ್ ಸಿಎಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಟ್ರಿನಿಟಿ ನಿಲ್ದಾಣದ ನಂತರ ಎಂಜಿ ರಸ್ತೆಯ ಕಡೆಗೆ ಮೆಟ್ರೋ ಹಳಿಗಳ ಮೇಲೆ ಮರದ ಕೊಂಬೆ ಬಿದ್ದಿದೆ. ಈ ಕಾರಣದಿಂದಾಗಿ ಇಂದ್ರನಗರದಿಂದ ವೈಟ್ಫೀಲ್ಡ್ ಮತ್ತು ಎಂಜಿ ರಸ್ತೆಯಿಂದ ಚಲ್ಲಘಟ್ಟದವರೆಗೆ ರಾತ್ರಿ 7.26ರಿಂದ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ ಎಂದಿದೆ.
ನಮ್ಮ ಮೆಟ್ರೋ ರೈಲು ಹಳಿಯ ಮೇಲೆ ಬಿದ್ದಿರುವಂತ ಮರದ ಕೊಂಬೆಯನ್ನು ತೆರವುಗೊಳಿಸೋ ಕಾರ್ಯ ನಡೆಯುತ್ತಿದೆ. ಈ ತೆರವು ಕಾರ್ಯಾಚರಣೆ ನಡೆದ ಬಳಿಕ, ಸಾಮಾನ್ಯ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ಪ್ರಯತ್ನಿಸಲಾಗುತ್ತದೆ ಅಂತ ತಿಳಿಸಿದೆ.
Due to a tree branch falling on the metro tracks just after Trinity Station towards MG road . Trains are operating only between Indranagar to Whitefield and MG road to Challaghatta , from 7.26 PM . Efforts are on to clear the branch and resume normal operations FKI
— ನಮ್ಮ ಮೆಟ್ರೋ (@OfficialBMRCL) June 2, 2024
ರೋಹಿತ್ ಶರ್ಮಾಗೆ ‘ದೊಡ್ಡ ಹೊಟ್ಟೆ’ ಇರುವ ಫೋಟೋ ವೈರಲ್ | Rohit Sharma’s fake pics
‘ಮೋದಿ’ ಮತ್ತೊಮ್ಮೆ ‘ಪ್ರಧಾನಿ’ಯಾಗ್ತಾರೆ: ‘ಕಾಲ ಭೈರವೇಶ್ವರ’ನ ‘ಶ್ವಾನ ಭವಿಷ್ಯ’