ಬೆಂಗಳೂರು : ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿಆರ್ ಫಾರ್ಮರ್ಸ್ ನಲ್ಲಿ ಇತ್ತೀಚಿಗೆ ರೇವ್ ಪಾರ್ಟಿ ನಡೆದಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾಳನ್ನು ಕಸ್ಟಡಿಗೆ ಪಡೆಯಲು ಇದೀಗ ಸಿಸಿಬಿ ಮುಂದಾಗಿದೆ. ಎಂದು ತಿಳಿದು ಬಂದಿದೆ.
ಹೌದು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಅವರನ್ನು ಸಿಸಿಬಿ ಅಧಿಕಾರಿಗಳು ಕಸ್ಟಡಿಗೆ ಪಡೆಯಲಿದ್ದು, ಹೆಚ್ಚಿನ ತನಿಖೆಯ ಸಲುವಾಗಿ ಸಿಸಿಬಿ ಅಧಿಕಾರಿಗಳು ಇದೀಗ ಹೇಮಾ ಅವರನ್ನು ಕಸ್ಟಡಿಗೆ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಹೇಮಾ ಪರಪ್ಪನ ಅಗ್ರಹಾರ ಜೈಲಲ್ಲಿ ಇದ್ದಾರೆ. ಜೈಲಿನಿಂದ ಸಿಸಿಬಿ ಕೋರ್ಟಿಗೆ ಹಾಜರುಪಡಿಸಲಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಡ್ರಗ್ಸ್ ಸೇವನೆ ಪಾರ್ಟಿ ಆಯೋಜನೆ ಸೇರಿ ಎಲ್ಲಾ ಆಯಾಮದಲ್ಲಿ ಸಿಸಿಬಿ ತನಿಖೆ ನಡೆಸುತ್ತಿದೆ ಇಂದು ಕಸ್ತಡಿಯ ಪಡೆದು ಸಿಸಿಬಿ ತನಿಖೆ ಚುರುಕುಗೊಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ತೆಲುಗು ನಟಿ ಹೇಮಾಳನ್ನು ಕಸ್ಟಡಿಗೆ ಪಡೆಯಲು ಸಿಸಿಬಿ ಮುಂದಾಗಿದೆ ಈಗಾಗಲೇ ಪೊಲೀಸರು ಹೇಮಾ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ.