ಬೆಂಗಳೂರು : ಹೆರಿಗೆ ನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಬಾಣಂತಿಯನ್ನು ಜನನಿ (33) ಎಂದು ತಿಳಿದುಬಂದಿದೆ. ಸದ್ಯ ಮಣಿಪಾಲ್ ಆಸ್ಪತ್ರೆಯ ವೈದ್ಯರ ವಿರುದ್ಧ ಕುಟುಂಬಸ್ಥರು ಇದೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಐವಿಎಫ್ ಮೂಲಕ ಜನನಿ ಹಾಗೂ ಕೇಶವ್ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದರು. ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ದಂಪತಿ ಹೆರಿಗೆ ಪ್ಯಾಕೇಜ್ ಮಾಡಿಸಿದ್ದರು. ಮೇ ಎರಡರಂದು ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಪ್ರಸವಪೂರ್ವ ಹೆರಿಗೆಯಾಗಿತ್ತು. ಬಳಿಕ ಜನನಿಗೆ ಜಾಂಡಿಸ್ ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದರು.
ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಬೆಳಿಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬಾಣಂತಿ ಜನನಿ ಸಾವನ್ನಪ್ಪಿದ್ದಾಳೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ 30 ಲಕ್ಷ ಬಿಲ್ ಮಾಡಿರುವ ಆರೋಪ ಕೂಡ ಇದೀಗ ಕೇಳಿ ಬರುತ್ತಿದೆ.