ಬೆಂಗಳೂರು: ಇಲ್ಲಿ ವಾಸಿಸುತ್ತಿದ್ದ ಬಿಹಾರದ ಎಲೆಕ್ಟ್ರಿಷಿಯನ್ ತನ್ನ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಕಾರಣ ಆಕೆಯನ್ನು ಕೊಂದು ಶವವನ್ನು ಶಿರಾಡಿ ಘಾಟ್ ನಲ್ಲಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು, ಅವನು ನಂತರ ಒಂದು ಕಥೆಯನ್ನು ಕಟ್ಟಿದ್ದಾನೆ.ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ.
ಟೈಮ್ಸ್ ಆಫ್ ಇಂಡಿಯಾ (ಟಿಒಐ) ಪ್ರಕಟಿಸಿದ ವರದಿಯ ಪ್ರಕಾರ, ಆರೋಪಿಯನ್ನು ಪೃಥ್ವಿ ರಾಜ್ ಸಿಂಗ್ ಎಂದು ಗುರುತಿಸಲಾಗಿದ್ದು, 9 ತಿಂಗಳ ಹಿಂದಷ್ಟೇ ಜ್ಯೋತಿ ಕುಮಾರಿಯನ್ನು ಮದುವೆಯಾಗಿದ್ದ. ಮದುವೆಯ ಸಮಯದಲ್ಲಿ ತನ್ನ ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದರಿಂದ ತನ್ನ ಹೆಂಡತಿಯ ಮೇಲೆ ಕೋಪಗೊಂಡಿದ್ದೇನೆ ಎಂದು ಅವನು ಪೊಲೀಸರಿಗೆ ತಿಳಿಸಿದ್ದಾನೆ. ಅವಳು ಅವನನ್ನು ಅನಾಗರಿಕ ಎಂದು ಎಂದು ಕರೆದಿದ್ದಳು. ಅಲ್ಲದೇ ಅವನೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಲು ಎಂದಿಗೂ ಒಪ್ಪಲಿಲ್ಲ.
“ಮದುವೆಯ ಸಮಯದಲ್ಲಿ, ಅವಳು ತನಗೆ 28 ವರ್ಷ ವಯಸ್ಸಾಗಿದೆ ಎಂದು ನಮ್ಮ ಕುಟುಂಬಕ್ಕೆ ತಿಳಿಸಿದ್ದಳು. ಆದ್ರೇ ಅವಳಿಗೆ 38 ವರ್ಷ ಅಲ್ಲದೇ ನನಗಿಂತ 10 ವರ್ಷ ದೊಡ್ಡವಳಿ ಎಂಬುದಾಗಿ ತಿಳಿದು ಬಂದಿತು. ಅವಳು ಎಂದಿಗೂ ಲೈಂಗಿಕತೆಗೆ ಒಪ್ಪಲಿಲ್ಲ ಮತ್ತು ನಮ್ಮನ್ನು ಅನಾಗರಿಕ ಪ್ರಾಣಿಗಳು ಎಂದು ಕರೆಯುವ ಮೂಲಕ ನನ್ನನ್ನು ಮತ್ತು ನನ್ನ ಹೆತ್ತವರನ್ನು ಅವಮಾನಿಸಿದಳು ಎಂದು ಸಿಂಗ್ ಪೊಲೀಸರಿಗೆ ತಿಳಿಸಿದರು.
ಇದರಿಂದ ಕುಪಿತಗೊಂಡ ಸಿಂಗ್ ಜ್ಯೋತಿಯನ್ನು ಮುಗಿಸಲು ನಿರ್ಧರಿಸಿದನು. ಅದರಂತೆ ಅವನು ತನ್ನ ಹೆಂಡತಿಯನ್ನು ಕೊಲ್ಲಲು ಬಿಹಾರದಿಂದ ತನ್ನ ಸ್ನೇಹಿತ ಸಮೀರ್ ಕುಮಾರ್ ನನ್ನು ಕರೆದನು. ಆಗಸ್ಟ್ 3 ರಂದು, ಇವರಿಬ್ಬರು ಉಡುಪಿಗೆ ತೆರಳಿದರು, ಅಲ್ಲಿ ಅವರು ಜ್ಯೋತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ಎಸೆದರು. ಮರುದಿನ, ಅವರು ಪೊಲೀಸರಿಗೆ ಕಾಣೆಯಾದ ದೂರು ದಾಖಲಿಸಿದರು.
ಹಾಸ್ಟೆಲ್ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
ಟಿಒಐ ವರದಿಗಳ ಪ್ರಕಾರ, ಜ್ಯೋತಿ ಹಲವಾರು ಬಾರಿ ಮನೆಯಿಂದ ಹೊರಬಂದು ನಂತರ ತಾನಾಗಿಯೇ ಹಿಂದಿರುಗುತ್ತಿದ್ದಳು ಎಂದು ಸಿಂಗ್ ಕಥೆಯನ್ನು ಕಟ್ಟಿ ಪೊಲೀಸರಿಗೆ ತಿಳಿಸಿದರು. ಆದರೆ ಈ ಬಾರಿ, ಅವಳ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಮತ್ತು ಅವನು ಅವಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದನು.
ಆದಾಗ್ಯೂ, ಪೊಲೀಸರ ವರಸೆಯಂತೆ ತನಿಖೆಗೆ ಇಳಿದಾಗ ಜ್ಯೋತಿಯನ್ನು ಆಕೆಯ ಪತಿ ಸಿಂಗ್ ಹತ್ಯೆ ಮಾಡಿರೋ ವಿಷಯ ಹೊರ ಬಂದಿದೆ. ಅಲ್ಲದೇ ಜ್ಯೋತಿಯ ಶವ ಪತ್ತೆ ಹಚ್ಚಿ, ಶವಪರೀಕ್ಷೆಯ ನಂತ್ರ, ಸಿಂಗ್ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
ಕೇಂದ್ರ ಸಚಿವೆ ʻಸ್ಮೃತಿ ಇರಾನಿʼಯನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗೋವಾ ಶಾಸಕ…?