Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಈ ತಪ್ಪು ಮಾಡಿದ್ರೆ `ಇನ್ವರ್ಟರ್ ಬ್ಯಾಟರಿ’ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

02/02/2026 12:11 PM

ಬಲೂಚಿಸ್ತಾನದಲ್ಲಿ ಭೀಕರ ದಾಳಿ: ಪಾಕಿಸ್ತಾನದ ಆರೋಪಗಳನ್ನು ತಳ್ಳಿಹಾಕಿದ ಭಾರತ

02/02/2026 12:07 PM

BIG NEWS : ಚಾಮರಾಜನಗರದಲ್ಲಿ ‘ಫ್ಲೋರೈಡ್’ ಮಿಶ್ರಿತ ನೀರು ಸೇವಿಸಿ ಕಿಡ್ನಿ ಕಳೆದುಕೊಂಡ 45 ಜನ!

02/02/2026 12:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು: 60.48 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು : ಜಿಲ್ಲಾಧಿಕಾರಿ ಜಿ. ಜಗದೀಶ ಮಾಹಿತಿ
KARNATAKA

ಬೆಂಗಳೂರು: 60.48 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು : ಜಿಲ್ಲಾಧಿಕಾರಿ ಜಿ. ಜಗದೀಶ ಮಾಹಿತಿ

By kannadanewsnow0710/05/2025 5:00 AM

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 60.48 ಕೋಟಿ ಅಂದಾಜು ಮೌಲ್ಯದ ಒಟ್ಟು 9 ಎಕರೆ 0.16 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು.

ಇಂದು ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಸರ್ಕಾರಿ ಕುಂಟೆ, ಕುಂಡ್ಲು ಕೆರೆ, ಸರ್ಕಾರಿ ಕರೆ, ಕುಂಟೆ, ರಾಜಕಾಲುವೆ, ಸ್ಮಶಾನ, ಬಂಡಿದಾರಿ, ಗುಂಡುತೋಪು, ಸರ್ಕಾರಿ ಖರಾಬು, ಸರ್ಕಾರಿ ಸೇಂದಿವನ ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.

ಬೆಂಗಳೂರು ಪೂರ್ವ ತಾಲ್ಲೂಕಿನ* ಬಿದರಹಳ್ಳಿ ಹೋಬಳಿಯ ಬಿದರಹಳ್ಳಿ ಗ್ರಾಮದ ಸ.ನಂ 193ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.50 ಲಕ್ಷಗಳಾಗಿರುತ್ತದೆ. ಬಿದರಹಳ್ಳಿ ಹೋಬಳಿಯ ಕೊಡಿಗೆಹಳ್ಳಿ ಗ್ರಾಮದ ಸ.ನಂ 40 ರ ಸರ್ಕಾರಿ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 2.00ಕೋಟಿಗಳಾಗಿರುತ್ತದೆ. ವರ್ತೂರು ಹೋಬಳಿಯ ವಾಲೇಪುರ ಗ್ರಾಮದ ಸ.ನಂ. 29 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.03 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.75 ಲಕ್ಷಗಳಾಗಿರುತ್ತದೆ.

ಆನೇಕಲ್ ತಾಲ್ಲೂಕಿನ* ಜಿಗಣಿ-1 ಹೋಬಳಿಯ ನಂಜಾಪುರ ಗ್ರಾಮದ ಸ.ನಂ. 27ರ ಕುಂಡ್ಲು ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.16 ಲಕ್ಷಗಳಾಗಿರುತ್ತದೆ. ಜಿಗಣಿ-2 ಹೋಬಳಿಯ ಬನ್ನೇರುಘಟ್ಟ ಗ್ರಾಮದ ಸ.ನಂ 169 ರ ಸರ್ಕಾರಿ ಕರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.17 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.70 ಕೋಟಿಗಳಾಗಿರುತ್ತದೆ. ಸರ್ಜಾಪುರ ಹೋಬಳಿಯ ಚಿಕ್ಕನಹಳ್ಳಿ ಕಾಮನಹಳ್ಳಿ ಗ್ರಾಮದ ಸ.ನಂ 19 ರ ಮಧ್ಯದಲ್ಲಿರುವ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.01 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.04 ಲಕ್ಷಗಳಾಗಿರುತ್ತದೆ. ಸರ್ಜಾಪುರ-2 ಹೋಬಳಿಯ ಗೂಳಿಮಂಗಳ ಗ್ರಾಮದ ಸ.ನಂ 9,10,11, 12 ರ ರಾಜ ಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.15 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.35 ಲಕ್ಷಗಳಾಗಿರುತ್ತದೆ. ಕಸಬಾ-1 ಹೋಬಳಿಯ ಮೆಣಸಿಗನಹಳ್ಳಿ ಗ್ರಾಮದ ಸ.ನಂ 93ರ ಕರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.08 ಲಕ್ಷಗಳಾಗಿರುತ್ತದೆ. ಕಸಬಾ-2 ಹೋಬಳಿಯ ಅವಡದೇನಹಳ್ಳಿ ಗ್ರಾಮದ ಸ.ನಂ 109ರ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.09 ಲಕ್ಷಗಳಾಗಿರುತ್ತದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ* ಉತ್ತರಹಳ್ಳಿ ಹೋಬಳಿಯ ಪುರದಪಾಳ್ಯ ಗ್ರಾಮದ ಸ.ನಂ 14/14,14/16ರ ಬಂಡಿದಾರಿ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.04ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.35 ಲಕ್ಷಗಳಾಗಿರುತ್ತದೆ. ಉತ್ತರಹಳ್ಳಿ ಹೋಬಳಿಯ ಯಲಚೇನಹಳ್ಳಿ ಗ್ರಾಮದ ಸ.ನಂ 45ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 6.00 ಕೋಟಿಗಳಾಗಿರುತ್ತದೆ. ಕೆಂಗೇರಿ ಹೋಬಳಿಯ ಕೆಂಚನಪುರ ಗ್ರಾಮದ ಸ.ನಂ 9 ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.12 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 1.75 ಕೋಟಿಗಳಾಗಿರುತ್ತದೆ.

ಬೆಂಗಳೂರು ಉತ್ತರ ತಾಲ್ಲೂಕಿನ* ದಾಸನಪುರ-3 ಹೋಬಳಿಯ ಅವ್ವೇರಹಳ್ಳಿ ಗ್ರಾಮದ ಸ.ನಂ 46ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.12 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.36 ಲಕ್ಷಗಳಾಗಿರುತ್ತದೆ. ದಾಸನಪುರ-2 ಹೋಬಳಿಯ ಕುದುರೆಗೆರೆ ಗ್ರಾಮದ ಸ.ನಂ 8ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 1 ಎಕರೆ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 7.50 ಕೋಟಿಗಳಾಗಿರುತ್ತದೆ. ದಾಸನಪುರ-2 ಹೋಬಳಿಯ ಲಕ್ಷ್ಮಿಪುರ ಗ್ರಾಮದ ಸ.ನಂ 88ರ ಸರ್ಕಾರಿ ಸೇಂದಿವನ ಒಟ್ಟು ಒತ್ತುವರಿ ತೆರವುಗೊಳಿಸಿರುವ 4 ಎಕರೆಗಳಾಗಿದ್ದು ಅಂದಾಜು ಮೌಲ್ಯ 24.00 ಕೋಟಿಗಳಾಗಿರುತ್ತದೆ.
*ಯಲಹಂಕ ತಾಲ್ಲೂಕಿನ* ಹೆಸರಘಟ್ಟ ಹೋಬಳಿಯ ಶಿವಕೋಟಿ ಗ್ರಾಮದ ಸಂ.ನಂ 55ರ ಗುಂಡುತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ 0.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ 0.85 ಲಕ್ಷಗಳಾಗಿರುತ್ತದೆ. ಜಾಲ ಹೋಬಳಿಯ ಬೆಟ್ಟಹಲಸೂರು ಗ್ರಾಮದ ಸಂ.ನಂ 259 ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ 0.28ಗುಂಟೆಗಳಾಗಿದ್ದು ಅಂದಾಜು ಮೌಲ್ಯ 14.00 ಕೋಟಿಗಳಾಗಿರುತ್ತದೆ.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕಿನ ತಹಶೀಲ್ದಾರ್ ರವರು ಉಪಸ್ಥಿತರಿದ್ದರು.

Bengaluru: Illegal encroachments worth Rs 60.48 crore have been removed: Deputy Commissioner G. Sudhakar Jagadish Information
Share. Facebook Twitter LinkedIn WhatsApp Email

Related Posts

ALERT : ಈ ತಪ್ಪು ಮಾಡಿದ್ರೆ `ಇನ್ವರ್ಟರ್ ಬ್ಯಾಟರಿ’ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

02/02/2026 12:11 PM2 Mins Read

BIG NEWS : ಚಾಮರಾಜನಗರದಲ್ಲಿ ‘ಫ್ಲೋರೈಡ್’ ಮಿಶ್ರಿತ ನೀರು ಸೇವಿಸಿ ಕಿಡ್ನಿ ಕಳೆದುಕೊಂಡ 45 ಜನ!

02/02/2026 12:03 PM1 Min Read

ALERT : ದಿನವಿಡಿ `ಇಯರ್ ಫೋನ್’ ಬಳಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಳ.!

02/02/2026 11:53 AM1 Min Read
Recent News

ALERT : ಈ ತಪ್ಪು ಮಾಡಿದ್ರೆ `ಇನ್ವರ್ಟರ್ ಬ್ಯಾಟರಿ’ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

02/02/2026 12:11 PM

ಬಲೂಚಿಸ್ತಾನದಲ್ಲಿ ಭೀಕರ ದಾಳಿ: ಪಾಕಿಸ್ತಾನದ ಆರೋಪಗಳನ್ನು ತಳ್ಳಿಹಾಕಿದ ಭಾರತ

02/02/2026 12:07 PM

BIG NEWS : ಚಾಮರಾಜನಗರದಲ್ಲಿ ‘ಫ್ಲೋರೈಡ್’ ಮಿಶ್ರಿತ ನೀರು ಸೇವಿಸಿ ಕಿಡ್ನಿ ಕಳೆದುಕೊಂಡ 45 ಜನ!

02/02/2026 12:03 PM

BREAKING: ಮೊದಲ ಗ್ರ್ಯಾಮಿ ಗೆದ್ದ ದಲೈ ಲಾಮಾ, ಗೋಲ್ಡನ್ ಗ್ರಾಮಫೋನ್ ಕಳೆದುಕೊಂಡ ಭಾರತ

02/02/2026 12:02 PM
State News
KARNATAKA

ALERT : ಈ ತಪ್ಪು ಮಾಡಿದ್ರೆ `ಇನ್ವರ್ಟರ್ ಬ್ಯಾಟರಿ’ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

By kannadanewsnow5702/02/2026 12:11 PM KARNATAKA 2 Mins Read

ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕಡಿತದಿಂದಾಗಿ ಮನೆಗಳು ಮತ್ತು ಕಚೇರಿಗಳಲ್ಲಿ ಇನ್ವರ್ಟರ್ಗಳ ಬಳಕೆ ಹೆಚ್ಚಾಗಿದೆ. ಇನ್ವರ್ಟರ್ ಇಲ್ಲದೆ, ವಿದ್ಯುತ್ ಸಮಸ್ಯೆಗಳು ಮತ್ತು…

BIG NEWS : ಚಾಮರಾಜನಗರದಲ್ಲಿ ‘ಫ್ಲೋರೈಡ್’ ಮಿಶ್ರಿತ ನೀರು ಸೇವಿಸಿ ಕಿಡ್ನಿ ಕಳೆದುಕೊಂಡ 45 ಜನ!

02/02/2026 12:03 PM

ALERT : ದಿನವಿಡಿ `ಇಯರ್ ಫೋನ್’ ಬಳಸುವವರೇ ಎಚ್ಚರ : ಈ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಳ.!

02/02/2026 11:53 AM

BREAKING : ಉಡುಪಿಯಲ್ಲಿ ಕಾಂಗ್ರೆಸ್ ಯುವ ಮುಖಂಡನ ಮೇಲೆ ತಲ್ವಾರ್ ನಿಂದ ಭೀಕರ ದಾಳಿ : ‘FIR’ ದಾಖಲು

02/02/2026 11:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.