ಬೆಂಗಳೂರು : ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನತೆಗೆ ವರುಣ ಇದೀಗ ತಂಪರೆದಿದ್ದು ಹೊಸಕೋಟೆ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.
ವರ್ಷದ ಮೊದಲ ಮಳೆ ಕಂಡು ಜನರು ಸಂತಸಗೊಂಡಿದ್ದಾರೆ.ಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಹಾಕಿದ್ದ ಪೆಂಡಲ್ ಚೆಲ್ಲಾಪಿಲ್ಲಿಯಾಗಿದೆ.ದೇವಸ್ಥಾನದ ಊಟದ ವೇಳೆ ಭಾರಿ ಮಳೆ ಬಂದಿದೆ. ಮಳೆಯಿಂದಾಗಿ ಭಕ್ತರು ಟೇಬಲ್ ಮೇಲಿರುವ ಊಟ ಬಿಟ್ಟು ಓಡಿ ಹೋಗಿರುವ ಘಟನೆ ನಡೆದಿದೆ.
ಭಕ್ತರಿಗಾಗಿ ಟೇಬಲ್ ಮೇಲೆ ಬಿಡಿಸಿದ್ದ ಊಟ ಎಲ್ಲ ಇದೀಗ ನೀರು ಪಾಲಾಗಿದೆ. ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ಅಲ್ಲದೆ ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಹೆಬ್ಬಗೋಡಿ ಸೇರಿ ಹಳೇ ಧಾರಾಕಾರವಾಗಿ ವರುಣ ಸುರದಿದ್ದಾನೆ.ಆನೇಕಲ್ ನಲ್ಲಿ ಅಲೆಕಲ್ಲು ಮಳೆ ಸುರಿದಿದೆ.