ಬೆಂಗಳೂರು : CMSR ಕನ್ಸಲ್ಟೆಂಟ್ಸ್ ನಡೆಸಿದ ಹಾಗೂ ಸಸ್ಟೇನೆಬಿಲಿಟಿ ಮೊಬಿಲಿಟಿ ನೆಟ್ವರ್ಕ್ ಸಂಸ್ಥೆ https://jhatkaa.org/ ಸಹಯೋಗದಲ್ಲಿ ಆಯೋಜಿಸಿರುವ ಗ್ರಾಹಕರ ಸಮೀಕ್ಷೆಯು, ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಮತ್ತು ಹವಾಮಾನ ಬದಲಾವಣೆಯನ್ನು ಪರಿಹರಿಸಲು ಇ-ಕಾಮರ್ಸ್ ಮತ್ತು ವಿತರಣಾ ಕಂಪನಿಗಳಿಂದ ವೇಗವರ್ಧಿತ ಇವಿ ಪರಿವರ್ತನೆಗೆ ಬೆಂಗಳೂರಿನ ಗ್ರಾಹಕರ ಬಲವಾದ ಬೇಡಿಕೆಯನ್ನು ತೋರಿಸಿದೆ.
ಸುಮಾರು 1,508 ಬೆಂಗಳೂರಿಗರು ಸೇರಿ ಮುಂಬೈ, ಪುಣೆ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ಈ ಐದು ಮಹಾನಗರಗಳ ಒಟ್ಟು 9048 ಗ್ರಾಹಕರನ್ನು ಸಮೀಕ್ಷೆ ಮಾಡಲಾಗಿದೆ. ಇ-ಕಾಮರ್ಸ್ ಕಂಪನಿಗಳು ಮತ್ತು ಅವುಗಳ ಸಂಚಾರದಲ್ಲಿ EV ಪರಿವರ್ತನೆ ಕುರಿತಾಗಿ ಗ್ರಾಹಕರ ಗ್ರಹಿಕೆಯನ್ನು ಅವಲೋಕಿಸಿದೆ.
BIG NEWS: ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯಗೊಳಿಸಿದ ಬ್ಯಾಂಕಿಗೆ 85 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ
“ಆಹಾರ ಮತ್ತು ದಿನಸಿಯನ್ನು ಸ್ಥಳೀಯವಾಗಿ ವಿತರಿಸುವ ಇ-ಕಾಮರ್ಸ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿದೆ” ಎಂದು CMSR ಕನ್ಸಲ್ಟೆಂಟ್ಸ್ ನಿರ್ದೇಶಕ ಗಜೇಂದ್ರ ರೈ ಹೇಳಿದರು. “ಬೆಂಗಳೂರಿನಂತಹ ಶ್ರೇಣಿ 1 ನಗರಗಳು ವಿತರಣೆ ಕಂಪನಿಗಳಿಗೆ ಪ್ರಮುಖ ಮಾರುಕಟ್ಟೆಗಳಾಗಿವೆ. ಕಂಪನಿಗಳು ಪ್ರಸ್ತುತ ಬಳಸುತ್ತಿರುವ ವಿತರಣಾ ವಾಹನಗಳ ಬಗ್ಗೆ ಇಲ್ಲಿನ ಗ್ರಾಹಕರ ಗ್ರಹಿಕೆಗಳು ಸಾಕಷ್ಟು ಒಳನೋಟಗಳನ್ನು ಹೊಂದಿವೆ. ಪ್ರತಿಕ್ರಿಯಿಸಿದವರಲ್ಲಿ ಗರಿಷ್ಠ (94%) ಜನರು 18-45 ವರ್ಷ ವಯಸ್ಸಿನವರು. ಇವರು ನಗರದೆಲ್ಲೆಡೆ ವಾಸಿಸುತ್ತಿದ್ದು, ಕಂಪನಿಯ ಪ್ರಧಾನ ಬಳಕೆದಾರರೂ ಆಗಿದ್ದಾರೆ” ಎಂದರು.
ಪ್ರತಿಕ್ರಿಯಿಸಿದವರಲ್ಲಿ 76% ರಷ್ಟು ಜನರು, ಎಲ್ಲ ಗ್ರಾಹಕರಿಗೂ ವಿತರಣೆ ಮಾಡುವ ವಾಹನಗಳೇ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಮಾಲಿನ್ಯಕ್ಕೆ ಕಾರಣವೆಂದು ಸಮೀಕ್ಷೆಯಲ್ಲಿ ತೋರಿಸಿದ್ದಾರೆ. ಈ ಪೈಕಿ 85.4% ರಷ್ಟು ಜನರು, ವಿತರಣಾ ಕಂಪನಿಗಳು ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸಲು EV ವಾಹನಗಳಿಗೆ ಬದಲಾಯಿಸಬೇಕೆಂದು ದೃಢಪಡಿಸಿದ್ದಾರೆ. ಇದು, CO2 ಹೊರಸೂಸುವಿಕೆಗೆ ಸಾರಿಗೆ ವಲಯವೇ 50% ಕ್ಕಿಂತ ಹೆಚ್ಚು ಕಾರಣವಾಗಿದೆ ಎಂಬ CSTEP ಸಂಶೋಧನೆಗೆ ಅನುಗುಣವಾಗಿದೆ. ನಗರದಲ್ಲಿ ಒಂದು ನಿರ್ದಿಷ್ಟ ವರ್ಷದಲ್ಲಿ ಕನಿಷ್ಠ 50,000 ಟನ್ CO2 ಇ-ಕಾಮರ್ಸ್ ವಿತರಣೆಯ ವಾಹನಗಳಿಂದಲೇ ಹೊರಸೂಸುತ್ತದೆ ಎಂದು ಜಾಗತಿಕ ನೆಟ್ವರ್ಕ್ ಆಗಿರುವ ಕ್ಲೀನ್ ಮೊಬಿಲಿಟಿ ಕಲೆಕ್ಟಿವ್ ಅಂದಾಜಿಸಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ: ದೆಹಲಿ, ಗುಜರಾತ್, ಉತ್ತರ ಪ್ರದೇಶ, ಹರಿಯಾಣದಲ್ಲಿ ಐಟಿ ದಾಳಿ
“ಹದಗೆಡುತ್ತಿರುವ ಗಾಳಿಯ ಗುಣಮಟ್ಟ, ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಂದ ನಾವೆಲ್ಲರೂ ಹೆಚ್ಚು ಪ್ರಭಾವಿತರಾಗಿದ್ದೇವೆ ಮತ್ತು ಬೆಂಗಳೂರಿನ ಈ ಕಟು ವಾಸ್ತವಕ್ಕೆ ಈ ಸಮೀಕ್ಷೆ ಸಾಕ್ಷಿಯಾಗಿದೆ. ಜನ ಮತ್ತು ವಾಹನ ದಟ್ಟಣೆಯ ನಗರದಲ್ಲಿ ಶೂನ್ಯ ಹೊರಸೂಸುವಿಕೆ ಫ್ಲೀಟ್ಗಳ ನಿಯೋಜನೆ ಮಾಡಲು, ಶುದ್ಧ ಗಾಳಿಯನ್ನು ಹೊಂದಲು, ಒಟ್ಟಾರೆ ಇಂಗಾಲವನ್ನು ಕಡಿಮೆ ಮಾಡಲು ಮತ್ತು ಇಂಧನ ವೆಚ್ಚದ ಹೊರೆಯನ್ನು ತಗ್ಗಿಸಲು ಕಂಪನಿಗಳು ಪ್ರಯತ್ನಿಸುತ್ತಿವೆ” ಎಂದು https://jhatkaa.org/ ನ ಪ್ರಚಾರ ನಿರ್ದೇಶಕಿ ದಿವ್ಯಾ ನಾರಾಯಣನ್ ಹೇಳಿದರು.
ಸಮೀಕ್ಷೆಯ ಭಾಗವಾಗಿ ಅಮೆಜಾನ್, ಫ್ಲಿಪ್ ಕಾರ್ಡ್, ಸ್ವಿಗ್ಗಿ ಮತ್ತು ಜೊಮ್ಯಾಟೋ ಕಂಪನಿಗಳನ್ನು ಗುರುತಿಸಲಾಗಿದೆ. ಕಿರಾಣಿ/ಸ್ಥಳೀಯವಾಗಿ ಸರಕು ಸಾಗಾಟದ ಸೇವೆ ಒದಗಿಸುವ ಲಾಜಿಸ್ಟಿಕ್ಸ್ ಕಂಪನಿಗಳಾದ ಬಿಗ್ ಬ್ಯಾಸ್ಕೇಟ್, ಡುನಜೋ, ಬ್ಲಿಂಕಿಟ್, ಗ್ರೋಫೇರ್ಸ್, ಜಿಯೋ ಮಾರ್ಟ್, ಮಿಲ್ಕ್ ಬ್ಯಾಸ್ಕೆಟ್, ಬ್ಲು ಡಾರ್ಟ್, ಫೆಡೆಕ್ಸ್, ಗಾಟಿ ಇತ್ಯಾದಿ ಸೇರಿವೆ.
‘ಮಕ್ಕಳ ಪೋಷಕ’ರೇ ಗಮನಕ್ಕೆ: ‘ಜವಾಹರ್ ನವೋದಯ ವಿದ್ಯಾಲಯ’ ಪ್ರವೇಶ ಪರೀಕ್ಷೆಗೆ ಆರ್ಜಿ ಆಹ್ವಾನ
ಕ್ಲೈಮೇಟ್ ಗ್ರೂಪ್ನ ವ್ಯಾಪಾರ ಉಪಕ್ರಮಗಳ ಮುಖ್ಯಸ್ಥ ಅತುಲ್ ಮುದಲಿಯಾರ್ ಹೇಳಿದರು, “ಎಲ್ಲ ಇ-ಕಾಮರ್ಸ್ ಮತ್ತು ಆಹಾರ ಕಂಪನಿಗಳು ಸರಕುಗಳನ್ನು ತಲುಪಿಸಲು ಸ್ವಚ್ಛವಾದ ಮಾರ್ಗಗಳನ್ನು ಕಂಡುಕೊಳ್ಳಲು ಇದು ಸಕಾಲ. ತಾವು ಖರೀದಿಸುವ ಸರಕುಗಳು ಯಾವುದೋ ರೀತಿಯಲ್ಲಿ ವಾಯು ಮಾಲಿನ್ಯವನ್ನು ಹೆಚ್ಚಿಸುತ್ತವೆ ಮತ್ತು ಹವಾಮಾನ ಬದಲಾವಣೆಗೆ ಕಾರಣವಾಗಿವೆ ಎಂಬುದನ್ನು ಮೂವರು ಗ್ರಾಹಕರಲ್ಲಿ ಇಬ್ಬರು ಒಪ್ಪಿಕೊಂಡಿರುವುದನ್ನು ಸಮೀಕ್ಷೆಯು ತೋರಿಸುತ್ತಿದೆ. ವಿತರಣೆ ವಾಹನಗಳನ್ನು ಎಲೆಕ್ಟ್ರಿಕ್ಗೆ ಪರಿವರ್ತಿಸುವ ಮೂಲಕ ಕಂಪನಿಗಳು ಗಮನಾರ್ಹ ಬದಲಾವಣೆಗೆ ಕಾರಣವಾಗಬಹುದು ಎಂದು ಗ್ರಾಹಕರು ನಂಬುತ್ತಾರೆ.
ಫ್ಲಿಪ್ ಕಾರ್ಟ್ ಮತ್ತು ಜೊಮ್ಯಾಟೋದಂತಹ ಪ್ರಮುಖ ಕಂಪನಿಗಳು EV100 ಯೋಜನೆಗೆ ಅನುಗುಣವಾಗಿ 2030ರ ಸುಮಾರಿಗೆ 100% ಇಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲು ಬೃಹತ್ ಮೊತ್ತವನ್ನು ಘೋಷಿಸಿವೆ. ಬದಲಾಗುವುದನ್ನು ಹೊರತುಪಡಿಸಿ, ವಿತರಣಾ ಕಂಪನಿಗಳಿಗೆ ಬೇರೆ ಆಯ್ಕೆ ಇರುವುದಿಲ್ಲ. ಬ್ರ್ಯಾಂಡ್-ಪ್ರಜ್ಞೆಯ ವ್ಯವಹಾರಗಳು ಗ್ರಾಹಕರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುತ್ತವೆ. ಆದರೆ, ಯಾವಾಗ ಮತ್ತು ಎಷ್ಟು ಬೇಗ ಎಂಬುದಷ್ಟೇ ಪ್ರಶ್ನೆ. ಗ್ರಾಹಕರ ಬಯಕೆಯಂತೂ ವರದಿಯಲ್ಲಿ ಸ್ಪಷ್ಟವಾಗಿದೆ” ಎಂದರು.