ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಮತ್ತು ಇತರೆ ವನ್ಯಜೀವಿಗಳಿಂದ ಆಗುವ ತೊಂದರೆಗಳಿಗೆ ಸಾರ್ವಜನಿಕರುಗಳು ದೂರು ನೀಡಲು ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ.
BIGG NEWS: ಅಕ್ಕಿಯಲ್ಲಿ ತಯಾರಿಸಿದ ಸಿದ್ದರಾಮಯ್ಯ ಅವರ ಮೂರ್ತಿ ಪ್ರದರ್ಶನ
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಬಿಎಂಪಿ ಮಾಹಿತಿ ಬಿಡುಗಡೆ ಮಾಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಕಂಡುಬಂದ ಸಂದರ್ಭದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಪತ್ರದ ಮೂಲಕ, ದೂರವಾಣಿ ಮೂಲಕ ದೂರುಗಳನ್ನು ನೀಡುತ್ತಿರುತ್ತಾರೆ. ಘನ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಪಿಟಿಷನ್ ಸಂಖ್ಯೆ: 5120/2021 ರಂತೆ ವೈಜ್ಞಾನಿಕ ರೀತಿಯಲ್ಲಿ ಪ್ರಾಣಿಹಿಂಸೆ ಆಗದಂತೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಮತ್ತು ಪ್ರಾಣಿಹಿಂಸೆ ತಡೆ ಕಾಯಿದೆ 1960 ಉಲ್ಲಂಘನೆಯಾಗದಂತೆ ಸಾರ್ವಜನಿಕರ ಜೀವಕ್ಕೆ ಹಾನಿಯಾಗದ ರೀತಿಯಲ್ಲಿ ಗಾಯಗೊಂಡ, ರೋಗಗ್ರಸ್ಥ ಹಾಗೂ ಸಾರ್ವಜನಿಕರಿಗೆ ಹಾನಿಯುಂಟುಮಾಡುವಂತಹ ಮಂಗಗಳನ್ನು ರಕ್ಷಣೆ ಮಾಡಿ ಸೂಕ್ತ ಆವಾಸ ಸ್ಥಳಕ್ಕೆ/ಪುನರ್ವಸತಿ ಸ್ಥಳಾಂತರ ಮಾಡಲಾಗುತ್ತದೆ ಎಂದು ಹೇಳಿದೆ.
BREAKING NEWS: ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿದ ರಾಹುಲ್ ಗಾಂಧಿ, ನಾಳೆಯ ಸಿದ್ದರಾಮೋತ್ಸವದಲ್ಲಿ ಭಾಗಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಂದ(ಮಂಗಗಳು, ಹಾವುಗಳು, ಪಕ್ಷಿಗಳು ಹಾಗೂ ಇನ್ನಿತರೆ) ಆಗಬಹುದಾದ ತೊಂದರೆಗಳನ್ನು ನಿವಾರಣೆ ಮಾಡುವ ಸಂಬಂಧ ಹಾಗೂ ತುರ್ತು ಸಂದರ್ಭಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕರುಗಳು ಟೋಲ್ ಫ್ರೀ ಸಂ: 1533( Toll free No: 1533) ಅನ್ನು ಅಥವಾ ನಮ್ಮ ಬೆಂಗಳೂರು ಮೊಬೈಲ್ ಆಫ್(Namma Bengaluru Mobile App) ಮುಖಾಂತರ ದೂರುಗಳನ್ನು ದಾಖಲಿಸಬಹುದು ಎಂದು ತಿಳಿಸಿದೆ.