ಬೆಂಗಳೂರು : ಕೇವಲ ಮದುವೆಯಾಗಿ ಎರಡೇ ತಿಂಗಳು ಕಳಿಯುವಷ್ಟರಲ್ಲಿ ಕೌಟುಂಬಿಕ ಕಲಹದಿಂದ ಬೆಸತ್ತು, ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವಿವೇಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಕಾನ್ಸ್ಟೇಬಲ್ ಅನ್ನು ಗೋವಿಂದ ಎಂದು ತಿಳಿದುಬಂದಿದ್ದು, ಕಳೆದ ಎರಡು ತಿಂಗಳ ಹಿಂದೆ ಅವರಿಗೆ ಮದುವೆಯಾಗಿತ್ತು ಕೌಟುಂಬಿಕ ಕಲಹದಿಂದ ಅವರು ಬೇಸತ್ತಿದ್ದರು ಎನ್ನಲಾಗಿದ್ದು, ನಗರದ ಕ್ವಾಟ್ರಸ್ನಲ್ಲಿರುವ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.ಘಟನೆ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.