ಮಾಲ್ಡಾ (ಪಶ್ಚಿಮ ಬಂಗಾಳ): ಮಹಿಳಾ ಮೋರ್ಚಾ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜಿಲ್ಲಾ ಉಪಾಧ್ಯಕ್ಷೆ ಮೌಸುಮಿ ದಾಸ್ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲಿತ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಮೌಸಮಿ ಅವರು ತಮ್ಮ ಮನೆಯ ಕೋಣೆಯಲ್ಲಿ ಮಲಗಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಪ್ರವೇಶಿಸಿ ಅವರನ್ನು ಥಳಿಸಿದ್ದಾರೆ. ಅಷ್ಟೇ ಅಲ್ಲದೇ, ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಈ ದಾಳಿಯಲ್ಲಿ ಟಿಎಂಸಿ ಬೆಂಬಲಿತ ಗೂಂಡಾಗಳು ಭಾಗಿಯಾಗಿದ್ದಾರೆ ಎಂದು ಮೌಸಮಿ ಅವರ ಪತಿ ಪಿಂಟು ಮಂಡಲ್ ಆರೋಪಿಸಿದ್ದಾರೆ. ಘಟನೆ ನಂತ್ರ, ಮೌಸಮಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ಟಿಎಂಸಿ ವಕ್ತಾರ ಶುವೊಮೊಯ್ ಬಸು, ಮಾಲ್ಡಾ ಆರೋಪವನ್ನು ತಳ್ಳಿಹಾಕಿದ್ದಾರೆ. ಪೊಲೀಸರ ತನಿಖೆಯಲ್ಲಿ ನಮಗೆ ನಂಬಿಕೆ ಇದೆ ಎಂದು ಹೇಳಿದರು. ದಾಳಿ ನಡೆದಿದ್ದರೆ ಅದರ ಹಿಂದಿನ ಕಾರಣವನ್ನು ಅವರು ಪತ್ತೆ ಮಾಡುತ್ತಾರೆ ಎಂದಿದ್ದಾರೆ.
ಚೀನಾಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಯುತ್ತೇನೆ: ದಲೈ ಲಾಮಾ| Dalai lama
BREAKING NEWS : ಭಾರತದ ಸಕ್ರಿಯ ಕೋವಿಡ್ ಪ್ರಕರಣಗಳು 45,281 ಕ್ಕೆ ಇಳಿಕೆ : 20 ಸಾವುಗಳಲ್ಲಿ 8 ಕೇರಳದಲ್ಲಿ ದೃಢ