ಬೆಂಗಳೂರು : ಡಿ.6 ರಂದು ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ನೀಡಬಾರದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ನಾರಾಯಣ ಗೌಡ ಹೇಳಿದ್ದಾರೆ.
ಈ ಬೆನ್ನಲ್ಲೇ ಬೆಳಗಾವಿಯಲ್ಲಿ ಇಂದು ಕನ್ನಡ ಪರ ಹೋರಾಟಗಾರರ ಪ್ರತಿಭಟನೆ ಮುಂದುವರೆದಿದೆ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡಬಾರದು ಎಂದು ಆಕ್ರೋಶ ವ್ಯಕ್ತೊಪಡಿಸಿ ಪ್ರತಿಭಟನೆ ನಡೆಸಿದೆ.
ಅದೇ ರೀತಿ ಕೂಡ ಕನ್ನಡ ಪರ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೂಡ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು, ಪೋಲೀಸರ ವಿರುದ್ಧ ಕೂಡ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ಘಟನೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಬೆಳಗಾವಿ-ಗೋವಾ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಸಚಿವರು ಬಂದರೆ ತೊಂದರೆ, ಜಿಲ್ಲಾಡಳಿತವೇ ಹೊಣೆ
ಡಿ.6 ರಂದು ಯಾವುದೇ ಕಾರಣಕ್ಕೂ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿಗೆ ಅವಕಾಶ ನೀಡಬಾರದು, ಸಭೆಗೆಂದು ಬಂದರೆ ಕರ್ನಾಟಕ ಹೀಯಾಳಿಸುತ್ತಾರೆ, ಕರ್ನಾಟಕದ ಒಂದಿಂಚೂ ಜಾಗ ಬಿಟ್ಟು ಕೊಡಲ್ಲ, ಮಹಾರಾಷ್ಟ್ರ ಸಚಿವರು ಬಂದರೆ ತೊಂದರೆ ಆಗುತ್ತದೆ, ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ, ಬೆಳಗಾವಿ ಗಡಿಯಲ್ಲೇ ಮಹಾರಾಷ್ಟ್ರ ಸಚಿವರನ್ನು ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಬೆಳಗಾವಿ ಎಂದಾಕ್ಷಣ ಮೈ ರೋಮಾಂಚನವಾಗುತ್ತದೆ, ಕರ್ನಾಟಕದ ಒಂದಿಂಚೂ ಜಾಗ ಬಿಟ್ಟು ಕೊಡಲ್ಲಸಚಿವರು ಬಂದರೆ ತೊಂದರೆ ಆಗುತ್ತದೆ, ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.
BIGG NEWS : ಸಹಚರರ ಜೊತೆ ಕೊಡಗಿನ ಹೋಂ ಸ್ಟೇಗೆ ಬಂದಿದ್ದ ಶಾರೀಖ್ : ಸ್ಪೋಟಕ ಮಾಹಿತಿ ಬಯಲು
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದ್ರೇ ಕಾನೂನು ಕ್ರಮ – ಸಿಎಂ ಬೊಮ್ಮಾಯಿ ಎಚ್ಚರಿಕೆ