ಬೆಳಗಾವಿ : ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಸದಸ್ಯಟಿ,ಎ ಶರವಣ ಮನವಿ ಮಾಡಿದ್ದಾರೆ.
ವಿಧಾನಪರಿಷತ್ ನಲ್ಲಿ ಮಾತನಾಡಿದ ಶರವಣ ‘ ಸರ್ಕಾರದ 44 ಇಲಾಖೆಯಲ್ಲಿ 2.5 ಲಕ್ಷ ಕ್ಕೂ ಹೆಚ್ಚು ಹುದ್ದೆ ಖಾಲಿಯಿದೆ. ಈ ವರ್ಷ 1 ಲಕ್ಷ ಹುದ್ದೆ ಭರ್ತಿ ಮಾಡುವುದಾಗಿ ಸರ್ಕಾರ ಹೇಳಿತ್ತು, ಆದರೆ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದರು.
ಕೆಲವು ಇಲಾಖೆಯಲ್ಲಿ ಕೆಲವೇ ಕೆಲವು ಸಿಬ್ಬಂದಿ ಮಾತ್ರ ಇದ್ದಾರೆ, ಸಿ, ಡಿ ಗ್ರೂಪ್ ಹುದ್ದೆಗಳು ಖಾಲಿಯಿದೆ. ಹಲವು ಬಾರಿ ಕೇಳಿದರೂ ಸರ್ಕಾರದ ಕಡೆಯಿಂದ ಉತ್ತರ ಬಂದಿಲ್ಲ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಟಿ.ಎ ಶರವಣ ಒತ್ತಾಯಿಸಿದ್ದಾರೆ.
BREAKING NEWS : ವಿಧಾನಸಭೆ ಕಲಾಪ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ |Belagavi Winter Session
BREAKING NEWS : ದೆಹಲಿಗೆ ಬರುವಂತೆ ಬುಲಾವ್ : ಸುರ್ಜೆವಾಲಾ ಭೇಟಿಯಾದ ಶಾಸಕ ಜಮೀರ್